ಇಬ್ಬರ ನಡುವೆ ಆ ಬಳಿಕ ಶತ್ರುತ್ವ ಹುಟ್ಟಿಕೊಂಡಿತ್ತೇನೋ ಎಂಬಂತೆ ಸುದ್ದಿಗಳು ಪ್ರಸಾರವಾದವು. ಆದರೆ ಇದೀಗ ಸ್ವತಃ ಸಸೂರ್ಯಕುಮಾರ್ ಅಂದಿನ ಪಂದ್ಯದ ಬಳಿಕ ಕೊಹ್ಲಿ ತನಗೆ ಏನು ಹೇಳಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಆ ಪಂದ್ಯದ ಬಳಿಕ ಸ್ವತಃ ಕೊಹ್ಲಿಯೇ ನನ್ನ ಬಳಿ ಬಂದು ಚೆನ್ನಾಗಿ ಆಡಿದೆ. ಗ್ರೇಟ್ ಇನಿಂಗ್ಸ್ ಮತ್ತು ನಿನ್ನ ಧೈರ್ಯ ಎಂದು ಬೆನ್ನುತಟ್ಟಿ ಅಭಿನಂದಿಸಿದ್ದರು. ಆ ಒಂದು ಕ್ಷಣದಲ್ಲಿ ಮಾತ್ರ ಆ ರೀತಿ ಪ್ರತಿಕ್ರಿಯಿಸಿದರೂ ಬಳಿಕ ಅವರು ನನ್ನ ಬಳಿ ನಾರ್ಮಲ್ ಆಗಿಯೇ ನಡೆದುಕೊಂಡರು ಎಂದು ಸೂರ್ಯಕುಮಾರ್ ಹೇಳಿದ್ದಾರೆ.