ಕನ್ನಡಿಗ ಕೆಎಲ್ ರಾಹುಲ್ ನಿನ್ನೆ ಮಾಡಿದ ದಾಖಲೆಯಿದು

ಸೋಮವಾರ, 30 ಜನವರಿ 2017 (10:42 IST)
ನಾಗ್ಪುರ: ನಿನ್ನೆ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಅದ್ಭುತವಾಗಿತ್ತು ಎಂದೇ ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. ಆದರೆ ಕನ್ನಡಿಗ ಕೆಎಲ್ ರಾಹುಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಕ್ಕೇ ಟೀಂ ಇಂಡಿಯಾ ಉತ್ತಮ ಮೊತ್ತ ದಾಖಲಿಸಲು ಸಾಧ್ಯವಾಯಿತು.

 
ಅವರು ನಿನ್ನೆ ಇಂಗ್ಲೆಂಡ್ ವಿರುದ್ಧ ಭಾರತೀಯ ಬ್ಯಾಟ್ಸ್ ಮನ್ ಒಬ್ಬ ಟಿ-ಟ್ವೆಂಟಿ ಪಂದ್ಯಗಳಲ್ಲಿ ಅತೀ ಹೆಚ್ಚು ವೈಯಕ್ತಿಕ ರನ್ ಮಾಡಿದ ದಾಖಲೆ ಮಾಡಿದರು. ಇದಕ್ಕೂ ಮೊದಲು ವೀರೇಂದ್ರ ಸೆಹ್ವಾಗ್ 2007 ರಲ್ಲಿ ಸೆಹ್ವಾಗ್ 68 ರನ್ ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿತ್ತು. ರಾಹುಲ್ ನಿನ್ನೆ 71 ರನ್ ಗಳಿಸಿದರು.

ಇನ್ನು, ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ ಟಿ-ಟ್ವೆಂಟಿ ಮಾದರಿಯ ಪಂದ್ಯಗಳಲ್ಲಿ 200 ವಿಕೆಟ್ ಗಳಿಸಿದ ಭಾರತದ ಎರಡನೇ ಬೌಲರ್ ಎನಿಸಿಕೊಂಡರು. ಇದಕ್ಕಿಂತ ಮೊದಲು ರವಿಚಂದ್ರನ್ ಅಶ್ವಿನ್ ಈ ಸಾಧನೆ ಮಾಡಿದ್ದಾರೆ. ಭಾರತದ ಪರವಾಗಿ  ಅತೀ ಹೆಚ್ಚು ಟಿ-ಟ್ವೆಂಟಿ ವಿಕೆಟ್ ಪಡೆದ ದಾಖಲೆ ಕೂಡಾ ಅಶ್ವಿನ್ ಹೆಸರಲ್ಲಿದೆ. ಅವರು 52 ವಿಕೆಟ್ ಪಡೆದಿದ್ದಾರೆ. ನಿನ್ನೆ ಆಶಿಷ್ ನೆಹ್ರಾ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದರು.

ಕನಿಷ್ಠ ಮೊತ್ತ ಗಳಿಸಿಯೂ ಎರಡನೇ ಬಾರಿ ಭಾರತ ಜಯಗಳಿಸಲು ಯಶಸ್ವಿಯಾಯಿತು. ಇದಕ್ಕಿಂತ ಮೊದಲು ಮೊದಲ ಸರದಿಯಲ್ಲಿ 138 ರನ್ ಗಳಿಸಿಯೂ ಜಿಂಬಾಬ್ವೆ ವಿರುದ್ಧ ಜಯಗಳಿಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ