ಮಹಿಳೆಯರ ಜತೆ ಕೆಎಲ್ ರಾಹುಲ್ ವರ್ತನೆ ಹೇಗಿರುತ್ತದೆ ಎಂದು ಬಹಿರಂಗಪಡಿಸಿದ ಪ್ರೀತಿ ಜಿಂಟಾ

ಭಾನುವಾರ, 7 ಏಪ್ರಿಲ್ 2019 (05:23 IST)
ಮೊಹಾಲಿ: ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿದ ತಪ್ಪಿಗೆ ಇತ್ತೀಚೆಗೆ ವಿವಾದಕ್ಕೀಡಾಗಿದ್ದ ಕ್ರಿಕೆಟಿಗ ಕೆಎಲ್ ರಾಹುಲ್ ಬಗ್ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಾಲಕಿ ಪ್ರೀತಿ ಜಿಂಟಾ ಮಾತನಾಡಿದ್ದಾರೆ.


ಹಾರ್ದಿಕ್ ಪಾಂಡ್ಯ ಜತೆಗೆ ಕಾಫಿ ವಿತ್ ಕರಣ್ ಶೋನಲ್ಲಿ ಅಸಭ್ಯ ಕಾಮೆಂಟ್ ಮಾಡಿದರೆಂದು ಕೆಲವು ಕಾಲ ಕ್ರಿಕೆಟ್ ನಿಂದಲೂ ನಿಷೇಧ ಶಿಕ್ಷೆ ಅನುಭವಿಸಿದ್ದ ಕೆಎಲ್ ರಾಹುಲ್ ಮಹಿಳೆಯರೊಂದಿಗೆ ಹೇಗೆ ವರ್ತಿಸುತ್ತಾರೆಂದು ಅವರು ಐಪಿಎಲ್ ಆಡುವ ತಂಡದ ಮಾಲಕಿಯೇ ಬಹಿರಂಗಪಡಿಸಿದ್ದಾರೆ.

‘ರಾಹುಲ್ ತುಂಬಾ ಒಳ್ಳೆಯ ಮನುಷ್ಯ. ಹುಡುಗಿಯರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುತ್ತಾರೆ. ಅವರು ಅಂತಹ ವಿವಾದದಲ್ಲಿ ಸಿಲುಕಿದ್ದು ಬೇಸರದ ಸಂಗತಿ. ಇದೆಲ್ಲಾ ಬಹುಶಃ ಅವರಿಗೆ ಪಾಠ ಕಲಿಯಲು ಸಿಕ್ಕಿದ ಅವಕಾಶ ಎನ್ನಬೇಕಷ್ಟೇ’ ಎಂದು ಪ್ರೀತಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ