ಅಭಿಮಾನಿ ಜತೆ ಚಕಮಕಿ ನಡೆಸಿದ ಕ್ರಿಕೆಟಿಗ ಕೆಎಲ್ ರಾಹುಲ್

ಬುಧವಾರ, 1 ಮಾರ್ಚ್ 2017 (09:01 IST)
ಬೆಂಗಳೂರು: ಟೀಂ ಇಂಡಿಯಾ ಆರಂಭಿಕ  ಕೆಎಲ್ ರಾಹುಲ್ ಟ್ವಿಟರ್ ನಲ್ಲಿ ಅಭಿಮಾನಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಮೊನ್ನೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿದ್ದಕ್ಕೆ ತಂಡವನ್ನು ಟೀಕಿಸಿದ್ದಕ್ಕೆ ರಾಹುಲ್ ತಿರುಗೇಟು ನೀಡಿದ್ದಾರೆ.


ಘಟನೆ ನಡೆದಿದ್ದು ಹೀಗೆ. ರವಿಚಂದ್ರನ್ ಅಶ್ವಿನ್ ರಾಹುಲ್ ಅವರ ಟ್ವಿಟರ್ ಪೇಜ್ ಫಾಲೋ ಮಾಡಿದ್ದರು. ಇದಕ್ಕೆ ರಾಹುಲ್ ಅದ್ಭುತ ಆಟಗಾರನೊಬ್ಬ ತನ್ನ ಖಾತೆಯನ್ನು ಫಾಲೋ ಮಾಡಿದ್ದಕ್ಕೆ ಧನ್ಯವಾದ ಎಂದು ಪ್ರತಿಕ್ರಿಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸುವಾಗ ಅಭಿಮಾನಿಯೊಬ್ಬ ಮೊದಲು ರನ್ ಗಳಿಸುವುದನ್ನು ಕಲಿಯಿರಿ ಎಂದು ಬೈದಾಡಿದ್ದ.

ಇದರಿಂದ ತಾಳ್ಮೆ ಕಳೆದುಕೊಂಡ ರಾಹುಲ್, ಮೊದಲು ನಿಮಗೆ ರನ್ ಗಳಿಸಲು ಗೊತ್ತಲ್ಲವೇ? ನೀವೇ ಬಂದು ರನ್ ಗಳಿಸುವುದು ಹೇಗೆಂದು ಹೇಳಿಕೊಡಿ ಎಂದು ಖಾರವಾಗಿಯೇ ತಿರುಗೇಟು ನೀಡಿದ್ದಾರೆ. ಪ್ರಥಮ ಟೆಸ್ಟ್ ನಲ್ಲಿ ತಂಡ ವಿಫಲವಾದರೂ, ರಾಹುಲ್ ಮೊದಲ ಇನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ