ಮತ್ತೆ ಕೆಎಲ್ ರಾಹುಲ್ ಟ್ವಿಟರ್ ನಲ್ಲಿ ಸುದ್ದಿ ಮಾಡಿದ ಈ ಬೆಡಗಿ!
ಆದರೆ ನಂತರ ಇಬ್ಬರೂ ತಾವು ಉತ್ತಮ ಸ್ನೇಹಿತರಷ್ಟೇ ಎಂದು ಹೇಳಿ ಎಲ್ಲಾ ಗಾಸಿಪ್ ಗಳನ್ನೂ ತಣ್ಣಗಾಗಿಸಿದ್ದರು. ಇದೀಗ ಮತ್ತೆ ರಾಹುಲ್ ಟ್ವಿಟರ್ ವಾಲ್ ನಲ್ಲಿ ನಿಧಿ ಸುದ್ದಿ ಮಾಡಿದ್ದಾರೆ.
ರಾಹುಲ್ ತಾವು ಲಾರ್ಡ್ಸ್ ಅಂಗಣಕ್ಕೆ ಬ್ಯಾಟಿಂಗ್ ಮಾಡಲು ಇಳಿಯುವ ಕ್ಷಣದ ಫೋಟೋ ಹಾಕಿ ನನ್ನ ಕನಸು ಇದು ಎಂದು ಬರೆದುಕೊಂಡಿದ್ದರು. ಇದನ್ನು ನಿಧಿ ಲೈಕ್ ಮಾಡಿದ್ದು ಮತ್ತೆ ಸುದ್ದಿಯಾಗಿದ್ದಾರೆ. ಅಷ್ಟೇ ಅಲ್ಲ, ನನಗೆ ಈ ಪೋಸ್ಟ್ ಇಷ್ಟವಾಯಿತು ಎಂದು ನಿಧಿ ಬರೆದುಕೊಂಡಿದ್ದಾರೆ. ಇದರಿಂದ ಮತ್ತೆ ಇಬ್ಬರ ನಡುವಿನ ಸಂಬಂಧದ ಬಗ್ಗೆ ಗಾಸಿಪ್ ಶುರುವಾಗಿದೆ.