ಇಂದಿನ ಟಿ-ಟ್ವೆಂಟಿ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕರು ಯಾರು ಗೊತ್ತೇ?!

ಗುರುವಾರ, 26 ಜನವರಿ 2017 (10:07 IST)
ಕಾನ್ಪುರ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಇಂದಿನ ಟಿ-ಟ್ವೆಂಟಿ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿಯುವವರು ಯಾರು ಗೊತ್ತೇ? ಸ್ವತಃ ನಾಯಕ ವಿರಾಟ್ ಕೊಹ್ಲಿ.

 
ಕೊಹ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಅಲ್ಲವೇ? ಅವರೇಕೆ ಆರಂಭಿಕರಾಗುತ್ತಾರೆ ಎಂದು ನಿಮಗನಿಸಬಹುದು. ಆದರೆ ಕೊಹ್ಲಿಗೆ ಐಪಿಎಲ್ ನಲ್ಲಿ ತಮ್ಮ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅನುಭವವಿದೆ. ಅಲ್ಲಿ ಯಶಸ್ಸು ಕಂಡ ರೀತಿಯಲ್ಲೇ ಇಲ್ಲೂ ಆರಂಭಿಕರಾಗಿ ಕಣಕ್ಕಿಳಿಯಲು ರೆಡಿ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ಇದರಿಂದ ಏಕದಿನ ಪಂದ್ಯದಲ್ಲಿ ಭಾರತೀಯರ ಆರಂಭಿಕರು ಕಂಡ ವೈಫಲ್ಯ ಇಲ್ಲಿರದು ಎಂಬ ವಿಶ್ವಾಸ. ಅಲ್ಲದೆ ಕೊಹ್ಲಿ ಅಭಿಮಾನಿಗಳಿಗೆ ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದರೆ ಅವರ ಝಲಕ್ ನೋಡುವ ಅವಕಾಶ ಸಿಗದು ಎಂಬ ಆತಂಕವಿರುತ್ತದೆ. ಆದರೆ ಅವರು ಆರಂಭಿಕರಾಗುವುದರಿಂದ ಪ್ರತೀ ಪಂದ್ಯದಲ್ಲೂ ಕೊಹ್ಲಿ ಬ್ಯಾಟಿಂಗ್ ನೋಡುವ ಅವಕಾಶ ಅಭಿಮಾನಿಗಳದ್ದಾಗಲಿದೆ.

ಮಧ್ಯಮ ಕ್ರಮಾಂಕದಲ್ಲಿ ತಂಡವನ್ನು ಆಧರಿಸಲು ಧೋನಿ,  ಯುವರಾಜ್ ಸಿಂಗ್, ಸುರೇಶ್ ರೈನಾರಂತಹ ಹಿರಿಯ ಆಟಗಾರರಿವುದರಿಂದ ಕೊಹ್ಲಿಗೆ ಇಂತಹದ್ದೊಂದು ದಿಟ್ಟ ನಿರ್ಧಾರ ಕೈಗೊಳ್ಳುವ ಧೈರ್ಯ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ