ಕೊಹ್ಲಿ, ಡಿ ವಿಲಿಯರ್ಸ್ ಅಬ್ಬರದ ಬ್ಯಾಟಿಂಗ್ : ರಾಯಲ್ ಚಾಲೆಂಜರ್ಸ್ 185 ರನ್

ಶುಕ್ರವಾರ, 22 ಏಪ್ರಿಲ್ 2016 (21:41 IST)
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ರೈಸಿಂಗ್ ಪುಣೆ ವಿರುದ್ಧ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಅವರ ಬಿರುಸಿನ ಸ್ಕೋರ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ತಂಡವು 3 ವಿಕೆಟ್ ಕಳೆದುಕೊಂಡು 185 ರನ್ ಉತ್ತಮ ಮೊತ್ತ ದಾಖಲಿಸಿದೆ.

 
ವಿರಾಟ್ ಕೊಹ್ಲಿ 2 ಸಿಕ್ಸರ್ ಮತ್ತು 7 ಬೌಂಡರಿಗಳಿಂದ ಕೂಡಿದ 63 ಎಸೆತಗಳಲ್ಲಿ 80 ರನ್ ದಾಖಲಿಸಿದರು.  ಎಬಿ ಡಿವಿಲಿಯರ್ಸ್ ಕೊಹ್ಲಿಗೆ ಹೋಲಿಸಿದರೆ ಇನ್ನೂ ವೇಗದ ಗತಿಯಲ್ಲಿ ಸ್ಕೋರ್ ಮಾಡಿದ್ದು 46 ಎಸೆತಗಳಲ್ಲಿ 83 ರನ್ ದಾಖಲಿಸಿದರು.  ಅವರ ಸ್ಕೋರಿನಲ್ಲಿ ನಾಲ್ಕು ಸಿಕ್ಸರುಗಳು ಮತ್ತು ಆರು ಬೌಂಡರಿಗಳಿವೆ. 

 ಕೊಹ್ಲಿ ಮತ್ತು ಡಿವಿಲಿಯರ್ಸ್ ಅವರೇ ಇಡೀ ಪಂದ್ಯವನ್ನು ನಿಭಾಯಿಸಿದರು. ಏಕೆಂದರೆ ಉಳಿದವರ ಸ್ಕೋರ್ ಎರಡಂಕಿಗಿಂತ ಕಡಿಮೆಯಾಗಿತ್ತು.  ರಾಯಲ್ ಚಾಲೆಂಜರ್ ಮೂರೂ ವಿಕೆಟ್‌ಗಳು ತಿಸಾರಾ ಪೆರೀರಾ ಅವರಿಗೆ ದಕ್ಕಿದೆ. 
 ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ