ನವದೆಹಲಿ: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದ ವೇಳೆ ಕೊಹ್ಲಿಯನ್ನು ಭೇಟಿಯಾಗಲು ಪೊಲೀಸ್ ಭದ್ರತೆ ಮುರಿದು ಮೂವರು ಅಭಿಮಾನಿಗಳು ಮೈದಾನಕ್ಕೆ ನುಗ್ಗಿದ ಘಟನೆ ನಡೆದಿದೆ.
ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಶನಿವಾರ ವಿರಾಟ್ ಕೊಹ್ಲಿ ಅವರನ್ನು ಭೇಟಿಯಾಗಲು ಮೂವರು ಅಭಿಮಾನಿಗಳು ಭದ್ರತೆಯನ್ನು ಮುರಿದು ಮೈದಾನದೊಳಕ್ಕೆ ನುಗ್ಗಿದ್ದಾರೆ.
ಕೊಹ್ಲಿ ಅವರು 13 ವರ್ಷಗಳ ನಂತರ ಅವರು ರಣಜಿ ಕ್ರಿಕೆಟ್ ಕಣಕ್ಕೆ ಮರಳಿದ್ದಾರೆ. ಅದರಿಂದಾಗಿ ಪಂದ್ಯದ ಆರಂಭಿಕ ದಿನದಿಂದಲೂ ಸಾವಿರಾರು ಅಭಿಮಾನಿಗಳು ಮೈದಾನಕ್ಕೆ ಲಗ್ಗೆ ಹಾಕುತ್ತಿದ್ದಾರೆ. ಪಂದ್ಯದ ಮೊದಲ ದಿನವೇ ಅಭಿಮಾನಿಯೊಬ್ಬ ಆಟ ನಡೆಯುತ್ತಿರುವಾಗಲೇ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿಯ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದು ಸುದ್ದಿಯಾಗಿತ್ತು.
ಇದೇ ಹೊತ್ತಿಗೆ ಸುಮಾರು 20ಜನ ಭದ್ರತಾ ಸಿಬ್ಬಂದಿಯೂ ಓಡಿ ಬಂದು ಅಭಿಮಾನಿಗಳನ್ನು ಹೊರಗೆ ಕರೆದೊಯ್ದರು.