ಕಷ್ಟಕರ ಎತ್ತರ ಏರಲು ಕೊಹ್ಲಿಯ ಆಕ್ರಮಣಕಾರಿ ಮನೋಭಾವ ನೆರವು : ಹರ್ಭಜನ್

ಶನಿವಾರ, 2 ಜುಲೈ 2016 (18:37 IST)
ಪ್ರಸಕ್ತ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರ ಆಕ್ರಮಣಕಾರಿ ಮನೋಭಾವವು ರಾಷ್ಟ್ರೀಯ ಕ್ರಿಕೆಟ್ ತಂಡ ಕಷ್ಟಕರ ಎತ್ತರಗಳನ್ನು ಏರಲು ನೆರವಾಗುತ್ತದೆಂದು ಭಾರತದ ಹಿರಿಯ ಲೆಗ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಸರಿಯಾದ ದೇಹಭಾಷೆಯಿಂದ, ಸೂಕ್ತ ಫಲಿತಾಂಶ ಮುಟ್ಟುವ ಉತ್ಸಾಹದಿಂದ ಆಡುವ ಕೊಹ್ಲಿಯ ಕ್ರೀಡಾ ಮನೋಭಾವ ನಮಗೆ ಅಗತ್ಯವಾಗಿದೆ ಎಂದು ಹರ್ಭಜನ್ ಟೆಲಿವಿಷನ್ ಶೋ ಆಪ್ ಕಿ ಅದಾಲತ್‌ನಲ್ಲಿ ಹೇಳಿದರು.   ಕಷ್ಟಕರ ಎತ್ತರಕ್ಕೆ ಮುಟ್ಟಲು ಭಾರತ ಕ್ರಿಕೆಟ್‌ಗೆ ಇದು ಒಳ್ಳೆಯ ಲಕ್ಷಣವಾಗಿದೆ ಎಂದು ಹರ್ಭಜನ್ ಹೇಳಿದರು.
 
 ರಾಷ್ಟ್ರೀಯ ತಂಡದ ಕೋಚ್ ಹುದ್ದೆಗೆ ಆಯ್ಕೆಯಾದ ಮಾಜಿ ಸಹ ಆಟಗಾರ ಅನಿಲ್ ಕುಂಬ್ಳೆಯನ್ನು ಕೂಡ ಹರ್ಭಜನ್ ಹೊಗಳಿದರು. ನಾನು ತುಂಬಾ ಗೌರವಿಸುವ ವ್ಯಕ್ತಿ ಅನಿಲ್ ಭಾಯ್. ಅನೇಕ ವರ್ಷಗಳ ಕಾಲ ಅವರ ಜತೆ ನಾನು ಆಡಿದ್ದೇನೆ. ನಾನು ಜೀವನದಲ್ಲಿ ಅವರಿಂದ ಕಲಿತ ಒಂದು ಪಾಠ ನಿಮ್ಮ ಹೋರಾಟವನ್ನು ನಿಲ್ಲಿಸಬೇಡಿ ಎನ್ನುವುದು. ಅವರು ಗಂಭೀರ ಮನೋಭಾವದ ವ್ಯಕ್ತಿಯಾಗಿದ್ದು, ನನ್ನ ಕಿಡಿಗೇಡಿ ಸ್ವಭಾವ ಅವರಿಗೆ ಗೊತ್ತಿದೆ. ಆದರೆ ನನ್ನ ಜತೆ ಅವರಿಗೆ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ ಎಂದು ಹರ್ಭಜನ್ ಹೇಳಿದರು. 
 
ನನ್ನಿಂದಾಗಿ ಅನಿಲ್ ಭಾಯ್ ಆಟವಾಡದೇ ಕುಳಿತಿದ್ದು ಖೇದಕರವೆನಿಸಿತು. ಆ ದಿನಗಳಲ್ಲಿ ನಾನು ಚೆನ್ನಾಗಿ ಆಡುತ್ತಿದ್ದೆ. ಆಗ ನನಗೆ 20 ವರ್ಷಗಳಾಗಿದ್ದು, ನಾಯಕ ನನ್ನನ್ನು ಆಯ್ಕೆ ಮಾಡಿದ್ದರು ಎಂದು  ಹಿಂದಿನ ನೆನಪನ್ನು ಹರ್ಭಜನ್ ಮೆಲಕು  ಹಾಕಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ