ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಮೂರನೇ ಬೌಲರ್ ಕುಲದೀಪ್ ಯಾದವ್

ಶುಕ್ರವಾರ, 22 ಸೆಪ್ಟಂಬರ್ 2017 (08:35 IST)
ಕೋಲ್ಕೊತ್ತಾ: ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತದ ಯುವ ಸ್ಪಿನ್ನರ್ ಕುಲದೀಪ್ ಯಾದವ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಏಕದಿನ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಮೂರನೇ ಭಾರತೀಯ ಎನ್ನುವ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ.

 
ಆಸ್ಟ್ರೇಲಿಯಾದ ಮ್ಯಾಥ್ಯೂ ವೇಡ್, ಅಶ್ತೋನ್ ಅಗರ್ ಮತ್ತು ಪ್ಯಾಟ್ ಕ್ಯುಮಿನ್ಸ್ ವಿಕೆಟ್ ಗಳನ್ನು ಸತತ ಮೂರು ಎಸೆತಗಳಲ್ಲಿ, ಬೌಲ್ಡ್, ಎಲ್ ಬಿಡಬ್ಲ್ಯು ಮತ್ತು ಕ್ಯಾಚ್ ಔಟ್ ಮೂಲಕ ಬಲಿ ಪಡೆದ ಕುಲದೀಪ್ ಯಾದವ್ ಈಡನ್ ಗಾರ್ಡನ್ ನಲ್ಲಿ ಮತ್ತೊಂದು ಇತಿಹಾಸ ನಿರ್ಮಿಸಿದರು.

ಇದಕ್ಕಿಂತ ಮೊದಲು ಕಪಿಲ್ ದೇವ್ ಮತ್ತು ಚೇತನ್ ಶರ್ಮಾ ಭಾರತದ ಪರ ಏಕದಿನ ಪಂದ್ಯಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು. ಇದೀಗ ಕುಲದೀಪ್ ಮೂರನೆಯವರಾಗಿ ಈ ಸಾಲಿಗೆ ಸೇರ್ಪಡೆಗೊಂಡರು.

ಅವರ ಮತ್ತು ಇತರ ಬೌಲರ್ ಗಳ ಸಾಹಸದ ನೆರವಿನಿಂದ ಭಾರತ ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಏಕದಿನ ಪಂದ್ಯವನ್ನು 50 ರನ್ ಗಳಿಂದ ಗೆದ್ದುಕೊಂಡಿತು. ಆಸ್ಟ್ರೇಲಿಯಾ 43.1 ಓವರ್ ಗಳಲ್ಲಿ 202 ರನ್ ಗಳಿಗೆ ಆಲೌಟ್ ಆಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ