ಕುಲದೀಪ್ ಯಾದವ್ ಅನಿಲ್ ಕುಂಬ್ಳೆಯ ಕೈಗೂಸು ಎಂದ ಟೀಂ ಇಂಡಿಯಾ ಕ್ರಿಕೆಟಿಗ

ಶುಕ್ರವಾರ, 13 ಅಕ್ಟೋಬರ್ 2017 (08:48 IST)
ನವದೆಹಲಿ: ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ಹೊಸ ಹವಾ ಎಬ್ಬಿಸಿರುವ ಸ್ಪಿನ್ನರ್ ಕುಲದೀಪ್ ಯಾದವ್ ಮಾಜಿ ಕೋಚ್, ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಕೈಗೂಸು ಎಂದು ಕ್ರಿಕೆಟಿಗ ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ.

 
ಕುಲದೀಪ್ ಗೆ ಸದ್ಯ ಸಿಗುತ್ತಿರುವ ಯಶಸ್ಸಿಗೆ ಕೋಚ್ ಆಗಿದ್ದಾಗ ಅನಿಲ್ ಕುಂಬ್ಳೆ ಕೊಟ್ಟ ಸಲಹೆಗಳೇ ಕಾರಣ ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ ನಲ್ಲಿ ನಾನು ಕುಲದೀಪ್ ಜತೆಗೆ ಆಡಿದ್ದೆ. ಆಗೆಲ್ಲಾ ಅವರು ಅನಿಲ್ ಕುಂಬ್ಳೆ ಸಲಹೆ ಕೇಳುತ್ತಲೇ ಇದ್ದರು. ಜತೆಗೆ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಜತೆಗೂ ಹೆಚ್ಚು ಸಂವಹನ ನಡೆಸುತ್ತಿದ್ದರು.

ಒಟ್ಟಾರೆಯಾಗಿ ಆತ ಅನಿಲ್ ಕುಂಬ್ಳೆಯ ಕೈಗೂಸು. ಕುಂಬ್ಳೆ ಆತನನ್ನು ಈ ಮಟ್ಟಕ್ಕೆ ತಯಾರು ಮಾಡಿದರು ಎಂದು ರೈನಾ ಹೊಗಳಿದ್ದಾರೆ. ಕುಲದೀಪ್ ಗೆ ಟೆಸ್ಟ್ ತಂಡದಲ್ಲಿ ಅವಕಾಶ ಕೊಡಿಸಿದ್ದೇ ಅನಿಲ್ ಕುಂಬ್ಳೆ. ಇದೇ ಕಾರಣಕ್ಕೆ ಕೊಹ್ಲಿ ಮತ್ತು ಕುಂಬ್ಳೆ ನಡುವೆ ವೈಮನಸ್ಯವಾಗಿತ್ತು ಎನ್ನುವುದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ