ನಿಮ್ಮ ಫೇವರಿಟ್ ಪುರುಷ ಕ್ರಿಕೆಟಿಗ ಯಾರು ಎಂದ ಪತ್ರಕರ್ತರಿಗೆ ಮಿಥಾಲಿ ರಾಜ್ ಕೊಟ್ಟ ಉತ್ತರ ಇದೀಗ ವೈರಲ್!

ಶನಿವಾರ, 24 ಜೂನ್ 2017 (08:09 IST)
ಲಂಡನ್: ಭಾರತದಲ್ಲಿ ಪುರುಷ ಕ್ರಿಕೆಟಿಗರಿಗೆ ಮತ್ತು ಕ್ರಿಕೆಟ್ ತಂಡಕ್ಕಿರುವಷ್ಟು ಪ್ರಧಾನ್ಯತೆ ಮಹಿಳೆಯರಿಗಿಲ್ಲ ಎನ್ನುವುದು ಹೊಸದೇನಲ್ಲ. ಹಾಗಂತ ಮಹಿಳಾ ಕ್ರಿಕೆಟಿಗರೆದುರೇ ಅವರನ್ನು ಕೆಳಮಟ್ಟಕ್ಕಿಳಿಸಿದರೆ ಸುಮ್ಮನಿರುತ್ತಾರೆಯೇ?


ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಕೊಟ್ಟ ಪ್ರತಿಕ್ರಿಯೆಯೊಂದು ಇದೀಗ ಭಾರೀ ಹಿಟ್ ಆಗಿದೆ. ಲಂಡನ್ ನಲ್ಲಿ ಮಹಿಳಾ ವಿಶ್ವಕಪ್ ಆಡಲು ತೆರಳಿರುವ ಭಾರತ ತಂಡದ ನಾಯಕಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಆಗ ಪತ್ರಕರ್ತರೊಬ್ಬರು ‘ನಿಮ್ಮ ಫೇವರಿಟ್ ಪುರುಷ ಕ್ರಿಕೆಟಿಗ ಯಾರು?’ ಎಂದು ಪ್ರಶ್ನಿಸಿದರು. ಅದಕ್ಕೆ ಮಿಥಾಲಿ ಕೊಟ್ಟ ಉತ್ತರ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ‘ನೀವು ಇದೇ ಪ್ರಶ್ನೆಯನ್ನು ಒಬ್ಬ ಪುರುಷ ಕ್ರಿಕೆಟಿಗನ ಬಳಿ ಹೋಗಿ ಕೇಳುತ್ತೀರಾ?’ ಎಂದು ಮಿಥಾಲಿ ತಿರುಗೇಟು ನೀಡಿದ್ದಾರೆ.

‘ಎಲ್ಲೇ ಹೋದರೂ ನನಗೆ ಈ ಪ್ರಶ್ನೆ ಕೇಳುತ್ತಾರೆ. ನೀವು ಪುರುಷ ಕ್ರಿಕೆಟಿಗನ ಬಳಿ ಹೋಗಿ ನಿಮ್ಮ ಫೇವರಿಟ್ ಮಹಿಳಾ ಆಟಗಾರ್ತಿ ಯಾರು ಎಂದು ಕೇಳಿ ನೋಡೋಣ’ ಎಂದು ಮಿಥಾಲಿ ಸವಾಲೆಸೆದಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ