ಎಚ್ ಸಿಎ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರ ತಿರಸ್ಕರಿಸಿದ್ದಕ್ಕೆ ಹೈಕೋರ್ಟ್ ಮೊರೆ ಹೋದ ಮೊಹಮ್ಮದ್ ಅಜರುದ್ದೀನ್

ಬುಧವಾರ, 18 ಜನವರಿ 2017 (10:12 IST)
ಹೈದರಾಬಾದ್:  ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ತಮ್ಮ ನಾಮಪತ್ರ ತಿರಸ್ಕೃತಗೊಂಡಿರುವುದನ್ನು ಪ್ರಶ್ನಿಸಿ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ಕಳಂಕದಿಂದಾಗಿ ನಿಷೇಧದಲ್ಲಿದ್ದ ಅಜರುದ್ದೀನ್ ಇತ್ತೀಚೆಗಷ್ಟೇ ಕ್ರಿಕೆಟ್ ಚಟುವಟಿಕೆಗಳಿಗೆ ಮರಳಲು ಹಸಿರು ನಿಶಾನೆ ಪಡೆದಿದ್ದರು. ಇದರ ಬೆನ್ನಲ್ಲೇ ತಮ್ಮ ತವರು ರಾಜ್ಯದ ಕ್ರಿಕೆಟ್ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದರು. ಆದರೆ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು.

ಈ ಹಿನ್ನಲೆಯಲ್ಲಿ ಹೈದರಾಬಾದ್ ನ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿರುವ  ಅಜರುದ್ದೀನ್ ಮೇಲ್ಮನವಿ ಸಲ್ಲಿಸಿದ್ದಾರೆ. ಅಜರುದ್ದೀನ್ ಮೇಲೆ ಬಿಸಿಸಿಐ ನಿಷೇಧ ತೀರ್ಪು ಹಿಂಪಡೆದಿದೆಯೇ ಎಂಬುದು ಖಚಿತಗೊಳ್ಳದ ಹಿನ್ನಲೆಯಲ್ಲಿ ಚುನಾವಣಾಧಿಕಾರಿ ರಾಜೀವ್ ರೆಡ್ಡಿ ಮಾಜಿ ನಾಯಕನ ನಾಮಪತ್ರ ತಿರಸ್ಕರಿಸಿದ್ದರು.

ಬಿಸಿಸಿಐ ಅವರ ಮೇಲಿನ ನಿಷೇಧ ತೆರವುಗೊಳಿಸಿದೆಯೇ ಎಂಬುದು ಖಚಿತಗೊಳ್ಳಬೇಕು ಹಾಗೂ ಅಜರುದ್ದೀನ್ ರಾಜ್ಯ ಕ್ರಿಕೆಟ್ ಸಂಸ್ಥೆಯ ಕೆಲವೊಂದು ನಿಯಮಾವಳಿಗಳನ್ನು ಪೂರ್ತಿಗೊಳಿಸಲು ವಿಫಲರಾಗುತ್ತಾರೆ ಎಂಬ ಕಾರಣಕ್ಕೆ ಅವರ ನಾಮಪತ್ರ ತಿರಸ್ಕರಿಸಿರುವುದಾಗಿ ಎಚ್ ಸಿಎ ತಿಳಿಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ