ಮೊಹಮ್ಮದ್ ಸಿರಾಜ್ ಕೈ ಸೇರಿದ ಮಹೀಂದ್ರಾ ಗಿಫ್ಟ್

ಸೋಮವಾರ, 5 ಏಪ್ರಿಲ್ 2021 (10:13 IST)
ಮುಂಬೈ: ಆಸ್ಟ್ರೇಲಿಯಾ ಸರಣಿಯಲ್ಲಿ ಅಭೂತಪೂರ್ವ ಸಾಧನೆ ತೋರಿದ ಟೀಂ ಇಂಡಿಯಾದ ಐವರು ಯುವ ಕ್ರಿಕೆಟಿಗರಿಗೆ ಆನಂದ್ ಮಹೀಂದ್ರಾ ಸಂಸ್ಥೆ ಘೋಷಿಸಿದ್ದ ಗಿಫ್ಟ್ ಕೊನೆಗೂ ಮೊಹಮ್ಮದ್ ಸಿರಾಜ್ ಕೈ ಸೇರಿದೆ.


ಟಿ ನಟರಾಜನ್, ಶ್ರಾದ್ಧೂಲ್ ಠಾಕೂರ್ ಈಗಾಗಲೇ ತಮಗೆ ಸಿಕ್ಕ ಮಹೀಂದ್ರಾ ಥಾರ್ ವಾಹನವನ್ನು ಉಡುಗೊರೆಯಾಗಿ ಪಡೆದಿದ್ದರು. ಇದೀಗ ಸಿರಾಜ್ ಸರದಿ. ತಮ್ಮ ತಾಯಿಯೊಂದಿಗೆ ಉಡುಗೊರೆ ಸ್ವೀಕರಿಸಿದ ಕ್ಷಣವನ್ನು ಸಿರಾಜ್ ಟ್ವೀಟ್ ಮಾಡಿದ್ದಾರೆ.

ಅಲ್ಲದೆ, ‘ಈ ಕ್ಷಣವನ್ನು ವರ್ಣಿಸಲು ನನ್ನಲ್ಲಿ ಪದಗಳೇ ಇಲ್ಲ. ಈ ಸುಂದರ ಉಡುಗೊರೆಗೆ ಬದಲಾಗಿ ನಾನೇನು ಹೇಳಲು ಸಾಧ್ಯವಿಲ್ಲ. ಈಗ ನಾನು ಮಹೀಂದ್ರ ಸರ್ ಗೆ ದೊಡ್ಡ ಥ್ಯಾಂಕ್ಸ್ ಅಷ್ಟೇ ಹೇಳಬಲ್ಲೆ’ ಎಂದು ಮೊಹಮ್ಮದ್ ಸಿರಾಜ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ