ಐಪಿಎಲ್ 2015 ಮಿಸ್ ಮಾಡಿಕೊಂಡ ಶಮಿಗೆ 2.2 ಕೋಟಿ ರೂ. ಪರಿಹಾರ

ಮಂಗಳವಾರ, 12 ಜುಲೈ 2016 (11:13 IST)
ಭಾರತ ತಂಡದ ಮತ್ತು ಬಂಗಾಳದ ವೇಗದ ಬೌಲರ್ ಮೊಹಮ್ಮದ್ ಶಮಿ 2015ರ ಐಪಿಎಲ್ ಮಿಸ್ ಮಾಡಿಕೊಂಡಿದ್ದಕ್ಕಾಗಿ ಬಿಸಿಸಿಐ 2.2 ಕೋಟಿ ರೂ. ಪರಿಹಾರವನ್ನು ನೀಡಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿಶ್ವಕಪ್‌ನಲ್ಲಿ ಮಂಡಿ ಗಾಯದ ನಡುವೆಯೂ ಶಮಿ ಆಡಿದ್ದರು. ಶಮಿ 2015ರ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಇಡೀ ವಿಶ್ವಕಪ್‌ನಲ್ಲಿ ಮತ್ತು ಮುಂಚಿನ ಟೆಸ್ಟ್ ಸರಣಿಗಳಲ್ಲಿ ಶಮಿ ನೋವನ್ನು ಸಹಿಸಿಕೊಂಡು ಆಡಿದ್ದರು.
 
ಮೆಗಾ ಈವೆಂಟ್‌ನಲ್ಲಿ ಅವರು ದೇಶದ ಪ್ರಮುಖ ಬೌಲರ್ ಆಗಿದ್ದು, ಭಾರತ ವಿಶ್ವಕಪ್ ಸೆಮಿ ಫೈನಲ್ಸ್ ಮುಟ್ಟಲು ನಿರ್ಣಾಯಕ ಪಾತ್ರವನ್ನು ವಹಿಸಿದ್ದರು.
 
ಗಾಯಗೊಂಡಿದ್ದರೂ ಶಮಿ ಆಡುವ ನಿರ್ಧಾರದಿಂದ ಭಾರೀ ಬೆಲೆ ತೆತ್ತು 2015ರ ಐಪಿಎಲ್ ಸೀಸನ್‌ನಲ್ಲಿ ಆಡಲು ಅಸಮರ್ಥರಾದರು ಮತ್ತು ಶಸ್ತ್ರಚಿಕಿತ್ಸೆಗೂ ಒಳಗಾದರು.
 
 ವಿಶ್ವಕಪ್‌ನಲ್ಲಿ ಅವರು 5 ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿದರು ಮತ್ತು ಐದನೇ ಶ್ರೇಷ್ಟ ಬೌಲರ್ ಆಗಿದ್ದರು. ಈ ವರ್ಷದ ಜನವರಿಯಲ್ಲಿ ಭಾರತ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದಾಗ ಶಮಿ ಮಂಡಿರಜ್ಜು ಗಾಯಕ್ಕೆ ಒಳಗಾಗಿ ಏಷ್ಯಾ ಕಪ್ ಟಿ 20 ಚಾಂಪಿಯನ್‌ಷಿಪ್ ಮಿಸ್ ಮಾಡಿಕೊಂಡರು. ಈಗ ಶಮಿ ವೆಸ್ಟ್ ಇಂಡೀಸ್ ವಿರುದ್ಧ ಸರಣಿಗೆ ವೆಸ್ಟ್ ಇಂಡೀಸ್‌ಗೆ ಆಗಮಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ