ವಿಶ್ವಕಪ್: ಮೊಹಮ್ಮದ್ ಶಾಮಿಗೆ ಸರ್ವಾಧಿಕ ವಿಕೆಟ್

ಶುಕ್ರವಾರ, 20 ಮಾರ್ಚ್ 2015 (11:41 IST)
ಭಾರತ ಕ್ರಿಕೆಟ್ ತಂಡದ ಬೌಲರ್ ಮೊಹಮ್ಮದ್ ಶಾಮಿ ಕಳೆದೆರಡು ದಿನಗಳ ಹಿಂದೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯಾವಳಿಯಲ್ಲಿ ಸಹ ಅತ್ಯುತ್ತಮ ಆಟ ಪ್ರದರ್ಶಿಸಿ 2 ವಿಕೆಟ್ ಕಿತ್ತರು. ಇವರೆಗೆ 17 ವಿಕೆಟ್‌ಗಳಿಸಿರುವ ಅವರು 2015 ವಿಶ್ವಕಪ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. 

16 ವಿಕೆಟ್ ಪಡೆಯಲು ಸಫಲರಾಗಿರುವ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಯಶಸ್ವಿ ಬೌಲರ್‌ಗಳ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. 
 
ಬಾಂಗ್ಲಾದೇಶದ ವಿರುದ್ಧ ಎರಡು ವಿಕೆಟ್ ಕಬಳಿಸುವುದರ ಮೂಲಕ ಶಾಮಿ ತಾವು ಪಡೆದ ವಿಕೆಟ್‌ಗಳ ಸಂಖ್ಯೆಯನ್ನು17ಕ್ಕೆ ಏರಿಸಿಕೊಂಡರು. ಒಂದು ವೇಳೆ ಭಾರತ ಫೈನಲ್‌ವರೆಗೆ ಆಡಿದರೆ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆಸಿಕೊಳ್ಳುವ ಅವಕಾಶ ಶಾಮಿಗೆ ಸಿಗಲಿದೆ. ವಿಶ್ವಕಪ್ ಒಂದರಲ್ಲಿ ಅತಿ ಹೆಚ್ಚು ಔಟ್ ಮಾಡಿದ ದಾಖಲೆ ಇದುವರೆಗೆ ಆಸ್ಟ್ರೇಲಿಯಾದ ಗ್ಲೇನ್ ಮೆಕ್‌ಗ್ರಾತ್ ಹೆಸರಿನಲ್ಲಿದೆ. 
 
ವಿಶ್ವಕಪ್‌ನಲ್ಲಿ ಭಾರತ ಇದುವರೆಗೂ ಅಜೇಯ ಓಟವನ್ನು ಮುಂದುವರೆವಲ್ಲಿ ಶಾಮಿ ಭೂಮಿಕೆ ಮಹತ್ವವಾದುದುದು. 2015ರ ವಿಶ್ವಕಪ್‌ನಲ್ಲಿ ಭಾರತ ಎಲ್ಲ ಪಂದ್ಯಗಳಲ್ಲಿ ಎದುರಾಳಿ ತಂಡವನ್ನು ಆಲ್ ಔಟ್ ಮಾಡಿದೆ. 

ವೆಬ್ದುನಿಯಾವನ್ನು ಓದಿ