ಮಾನಸಿಕ ಸಮಸ್ಯೆ ನಿವಾರಣೆಗೆ ಹೋರಾಟ: ಇಂಗ್ಲೆಂಡ್ ಕ್ರಿಕೆಟರ್ ಪನೆಸಾರ್ ಬಹಿರಂಗ

ಗುರುವಾರ, 26 ಮೇ 2016 (17:44 IST)
ಇಂಗ್ಲೆಂಡ್ ಟೆಸ್ಟ್ ಮತ್ತು ಏಕ ದಿನ ಪಂದ್ಯಗಳ ಮಾಜಿ ಆಟಗಾರ ಮಾಂಟಿ ಪನೆಸಾರ್ ಆತಂಕ ಮತ್ತು ಬುದ್ಧಿಭ್ರಮಣೆ ನಿವಾರಣೆಗೆ ಚಿಕಿತ್ಸೆ ಪಡೆಯುತ್ತಿದ್ದು, ಆತ್ಮವಿಶ್ವಾಸ ಮತ್ತು ಆತ್ಮಾಭಿಮಾನದ ಕೊರತೆಯಿಂದ ಈ ಸಮಸ್ಯೆ ಉದ್ಭವಿಸಿದೆಯೆಂದು ತಿಳಿಸಿದ್ದಾರೆ. ಪನೆಸರ್ ಇಂಗ್ಲಿಷ್ ಕ್ರಿಕೆಟ್ ಆಟಗಾರರಾಗಿದ್ದು, ಪ್ರಸಕ್ತ ನಾರ್ತ್‌ಹ್ಯಾಂಪ್ಟನ್‌ಶೈರ್‌ ಪರ ಆಡುತ್ತಿದ್ದಾರೆ.

ಪನೆಸಾರ್ 2006ರಲ್ಲಿ ಭಾರತದ ವಿರುದ್ಧ ನಾಗ್ಪುರದಲ್ಲಿ ಚೊಚ್ಚಲ ಟೆಸ್ಟ್ ಆಡಿದ್ದರು.  2007ರಲ್ಲಿ ಇಂಗ್ಲೆಂಡ್ ಪರ ಏಕದಿನ ಪಂದ್ಯಗಳನ್ನು ಆಡಿದ್ದರು.  ಎಡಗೈ ಸ್ಪಿನ್ನರ್ ಆಗಿರುವ ಪನೇಸರ್‌ ತಾನು ಔಷಧಿಯನ್ನು ಸರಿಯಾಗಿ ಸೇವಿಸದೇ ಇದ್ದಿದ್ದರಿಂದ ಸಮಸ್ಯೆ ಉಲ್ಬಣಿಸಿದೆ ಎಂದಿದ್ದಾರೆ.
 
ಪನೇಸಾರ್ ಟೆಸ್ಟ್ ತಂಡದಿಂದ ಮೂರು ವರ್ಷಗಳು ಹೊರಗುಳಿದ ಬಳಿಕ ಮತ್ತೆ ಕಮ್‌ಬ್ಯಾಕ್ ಆಗಲು ಕಣ್ಣಿರಿಸಿದ್ದಾರೆ. 2015ರಲ್ಲಿ ಮೈದಾನದ ಹೊರಗಿನ ವಿಷಯಗಳಿಗಾಗಿ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಂದಾಗಿ ಸಸೆಕ್ಸ್ ಅವರನ್ನು ತೆಗೆದುಹಾಕಿತ್ತು.  ನೈಟ್ ಕ್ಲಬ್ ಬೌನ್ಸರುಗಳ ಮೇಲೆ ಮೂತ್ರ ಮಾಡಿದ ಕಾರಣಕ್ಕಾಗಿ ಸಸೆಕ್ಸ್ ಅವರನ್ನು ಬಿಡುಗಡೆ ಮಾಡಿತ್ತು. 
 
ಕ್ರೀಡಾಪಟುವಾಗಿ ನಾವು ಮಾನಸಿಕವಾಗಿ ಸದೃಢ ಎಂದು ಹೆಮ್ಮೆಪಡುತ್ತೇವೆ. ಆದರೆ ನಮ್ಮಲ್ಲಿ ದೌರ್ಬಲ್ಯ ಇದ್ದಾಗ ಅದನ್ನು ಮುಚ್ಚಿಡಲು ಯತ್ನಿಸುತ್ತೇವೆ. ನಾವು ಮಾನಸಿಕವಾಗಿ ದೃಢಕಾಯ ಎಂದು ತೋರಿಸಲು ಯತ್ನಿಸುತ್ತೇವೆ. ನೀವು ಬೇಗ ನಿಮ್ಮ ಸಮಸ್ಯೆಯನ್ನು ಬಿಚ್ಚಿಟ್ಟಾಗ ಬೇಗನೇ ನಿಮಗೆ ಬೆಂಬಲ, ನೆರವು ಸಿಗುತ್ತದೆ ಎಂದು ಹೇಳಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ