324 ಪಂದ್ಯಗಳಲ್ಲಿ ನಾಯಕತ್ವ: ಪಾಂಟಿಂಗ್ ದಾಖಲೆಯನ್ನು ಸರಿಸಮಗೊಳಿಸಿದ ಧೋನಿ

ಗುರುವಾರ, 23 ಜೂನ್ 2016 (13:19 IST)
ಭಾರತದ ಕ್ರಿಕೆಟ್ ನಾಯಕ ಧೋನಿ ಎಲ್ಲಾ ಮಾದರಿಗಳಲ್ಲಿ 324 ಅಂತಾರಾಷ್ಟ್ರೀಯ ಪಂದ್ಯಗಳಿಗೆ ನಾಯಕತ್ವ ವಹಿಸಿರುವ ಪಾಂಟಿಂಗ್ ದಾಖಲೆಯನ್ನು ಸಮಗೊಳಿಸಿದ್ದಾರೆ. ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ಮೂರನೇ ಮತ್ತು ಕೊನೆಯ ಟಿ 20 ಪಂದ್ಯದಲ್ಲಿ ಧೋನಿ ಈ ಸಾಧನೆಯನ್ನು ಮಾಡಿದರು. ಭಾರತ 2-1ರಿಂದ ಸರಣಿಯನ್ನು ಗೆದ್ದಿದೆ. ಏಕದಿನದಲ್ಲಿ ಆತಿಥೇಯ ತಂಡವನ್ನು 3-0ಯಿಂದ ವೈಟ್ ವಾಷ್ ಮಾಡಿದ್ದರು.
 
 
2007ರಲ್ಲಿ ನಾಯಕರಾಗಿ ನೇಮಕವಾಗಿದ್ದ ಧೋನಿ 60 ಟೆಸ್ಟ್‌ಗಳಲ್ಲಿ, 194 ಏಕದಿನ ಪಂದ್ಯಗಳಲ್ಲಿ ಮತ್ತು 70 ಟಿ 20 ಅಂತಾರಾಷ್ಟ್ರೀಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.
 
 34 ವರ್ಷದ ಧೋನಿ ಅತ್ಯಂತ ಯಶಸ್ವಿ ನಾಯಕರಾಗಿದ್ದು, 27 ಟೆಸ್ಟ್ ಪಂದ್ಯದ ಗೆಲುವುಗಳನ್ನು, 107 ಏಕದಿನ ಗೆಲುವು ಮತ್ತು 40 ಟಿ 20 ಗೆಲುವುಗಳನ್ನು ಕಂಡಿದ್ದಾರೆ. ವಿಶ್ವ ಟಿ 20(2007), ವಿಶ್ವಕಪ್(2011)  ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ(2013)  ಭಾರತವನ್ನು ಗೆಲುವಿನತ್ತ ಮುನ್ನಡೆಸಿದ್ದು ಐಸಿಸಿ ಟೆಸ್ಟ್ ಕ್ರಮಾಂಕದಲ್ಲಿ ಅಗ್ರಸ್ಥಾನಕ್ಕೆ ತಂದಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ