ವೀರೂ, ಗೌತಿ ಆಯ್ತು ಮತ್ತೀಗ ಧೋನಿ ವಿರುದ್ಧ ದ್ವೇಷ ಕಕ್ಕಿದ ಭಜ್ಜಿ

ಬುಧವಾರ, 26 ಅಕ್ಟೋಬರ್ 2016 (09:26 IST)
ವೀರೇಂದ್ರ ಸೆಹವಾಗ್ ಆಯ್ತು, ಗೌತಮ್ ಗಂಭೀರ್ ಆಯ್ತು. ಮತ್ತೀಗ ಹರ್ಭಜನ್ ಸಿಂಗ್ ಸರದಿ. ಅವರು ಕೂಡ ಟೀಮ್ ಇಂಡಿಯಾ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ದ್ವೇಷ ಕಾರಲು ಪ್ರಾರಂಭಿಸಿದ್ದಾರೆ. 

ಹೌದು, ಧೋನಿ ನಾಯಕತ್ವದಡಿ ಆಟವಾಡಿದ್ದ ಹಿರಿಯ ಆಟಗಾರರಾದ ಗೌತಿ ಮತ್ತು ಗಂಭೀರ್ ಈ ಹಿಂದೆ ಧೋನಿ ವಿರುದ್ಧ ವಿರೋಧ ವ್ಯಕ್ತ ಪಡಿಸಿದ್ದು ಎಲ್ಲರಿಗೂ ಗೊತ್ತಿರೋ ಸಂಗತಿ. ಈಗ ಹೊಸ ವಿಷಯ ಏನೆಂದರೆ ಧೋನಿ ವಿರೋಧಿ ಗುಂಪಿನಲ್ಲಿ ಹರಭಜನ್ ಕೂಡ ಗುರುತಿಸಿಕೊಂಡಿದ್ದಾರೆ.
 
ವೀರೂ ಮತ್ತು ಗೌತಿ ಮಾಹಿ ವಿರುದ್ಧ ಬಹಿರಂಗವಾಗಿ ಮಾತನಾಡಿ ಆಕ್ರೋಶ ವ್ಯಕ್ತ ಪಡಿಸಿದ್ದರು. ಆದರೆ ಭಜ್ಜಿ ಪರೋಕ್ಷವಾಗಿ ತಮ್ಮ ಅಸಮಧಾನವನ್ನು ಹೊರ ಹಾಕಿದ್ದಾರೆ. 
 
ದೇಶದಲ್ಲಿ ಬೆಸ್ಟ್ ವಿಕೆಟ್ ಕೀಪರ್ ಯಾರು?  ವೃದ್ಧಿಮಾನ್ ಸಹಾ ಅಥವಾ ಧೋನಿನಾ ಎಂದು ಕೇಳಿದರೆ, ಯಾರು ಬೇಕಾದರೂ ಧೋನಿ ಎಂದು  ಘಂಟಾಘೋಷವಾಗಿ ಹೇಳುತ್ತಾರೆ. ಆದರೆ ಭಜ್ಜಿ ಪ್ರಕಾರ ಧೋನಿಗಿಂತ ಸಹಾ ಬೆಸ್ಟ್.
 
ಮೊನ್ನೆ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಸಹಾ ಅವರಿಗೆ ಭಜ್ಜಿ, 'ವಿಶ್ವದ ದಿ ಬೆಸ್ಟ್ ವಿಕೆಟ್ ಕೀಪರ್ ಸಹಾಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಟ್ವೀಟ್ ಮಾಡಿದ್ದಾರೆ. ಸಾಹಾನನ್ನು ವಿಶ್ವದ ದಿ ಬೆಸ್ಟ್ ವಿಕೆಟ್ ಕೀಪರ್ ಎಂದು ಬಣ್ಣಿಸಿ, ಧೋನಿಗೆ ಅವಮಾನ ಮಾಡಿದ್ದಾರೆ. ಈ ಮೂಲಕ ಮಾಹಿ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದಾರೆ.
 
ಭಜ್ಜಿಯ ಈ ಮೂರ್ಖನಕ್ಕೆ ಧೋನಿ ಅಭಿಮಾನಿಗಳು ತಕ್ಕ ಪ್ರತ್ಯುತ್ತರ ನೀಡಿದ್ದು, ಹೀಗೆ:
 
"ಹರ್ಭಜನ್ ಸಿಂಗ್ ನಿಮಗೆ ಡಾಕ್ಟರ್ ಅವಶ್ಯಕತೆ ಇದೆ".
 
" ಯಾರು ಎಷ್ಟು ದ್ವೇಷ ಕಾರಿದರೂ ಧೋನಿ ಬೆಸ್ಟ್ ಅನ್ನೋದನ್ನಾ ಅಳಿಸಿ ಹಾಕೋಕಲ್ಲ".
 
"ಹರ್ಭಜನ್ ಸಿಂಗ್ ನಿನಗೇನು ಹುಚ್ಚಾ"
 
"ಭಜ್ಜಿ ನಿವೃತ್ತಿಯ ಅಂಚಿನಲ್ಲಿದ್ದಾರೆ. ಅದಕ್ಕೆ ಎಲ್ಲವನ್ನು ಮರೆಯೋಕೆ ಶುರು ಮಾಡಿದ್ದಾರೆ"
 
 
ಪರೋಕ್ಷವಾಗಿ ಧೋನಿ ಬೆಸ್ಟ್ ವಿಕೆಟ್ ಕೀಪರ್ ಅಲ್ಲ ಎಂದಿರುವುದು ಭಜ್ಜಿ ಮಾಹಿಯನ್ನು ದ್ವೇಷ ಮಾಡೋಕೆ ಸುರು ಮಾಡಿದ್ದಾರೆ ಎನ್ನುವುದು ಖಚಿತವಾಗಿ ಬಿಡುತ್ತದೆ.
 
ತಂಡಕ್ಕೆ ಮರಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವನ ಭಜ್ಜಿ ಕಡೆ ಆಯ್ಕೆ ಸಮಿತಿ ತಿರುಗಿಯೂ ನೋಡುತ್ತಿಲ್ಲ. ತಂಡಕ್ಕೆ ಆಯ್ಕೆಯಾಗದ ಹತಾಶೆಯಲ್ಲಿ ಭಜ್ಜಿ ಏಕದಿನ ತಂಡದ ನಾಯಕ ಧೋನಿ ವಿರುದ್ಧ ಕಿಡಿಕಾರಲು ಪ್ರಾರಂಭಿಸಿದ್ದಾರೆ. 
 
ಕಳೆದ ಕೆಲ ದಿನಗಳ ಹಿಂದೆ ಭಜ್ಜಿ ಕೊಹ್ಲಿ, ಅಶ್ವಿನ್‌ಗೂ ಕಿಂಡಲ್ ಮಾಡಿದ್ದರು. ಭಾರತ ತಂಡ ಟೆಸ್ಟ್ ಸರಣಿಯನ್ನು ಗೆಲ್ಲಲು ಅಶ್ವಿನ್ ಕಾರಣರಲ್ಲ 'ಪಿಚ್' ಕಾರಣ ಎಂದಿದ್ದರು. ಅವರ ಈ ದುರ್ವರ್ತನೆಗೆ ಕೊಹ್ಲಿ ಮತ್ತು ಅಶ್ವಿನ್ ಅಭಿಮಾನಿಗಳು ಕೆಂಡ ಕಾರಿದ್ದರು.
 
ಆದರೂ ತಮ್ಮ ಹಳೆ ಚಾಳಿಯನ್ನು ಮುಂದುವರೆಸಿರುವ ಭಜ್ಜಿ ಮತ್ತೆ ಮಹಾ ಪ್ರಮಾದವನ್ನೆಸಗಿದ್ದಾರೆ. ಇದು ಧೋನಿಗೆ ಕಪ್ಪು ಚುಕ್ಕೆ ಅಲ್ಲ. ತಮಗೆ ಎನ್ನುವುದನ್ನು ಭಜ್ಜಿ ಆದಷ್ಟು ಬೇಗ ಅರ್ಥ ಮಾಡ್ಕೋಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ