ಎಂಎಸ್ ಧೋನಿಯದ್ದು ಪಕ್ಕಾ ಟೈಮಿಂಗ್, ವಿರಾಟ್ ಕೊಹ್ಲಿ ಪಟ್ಟಾಭಿಷೇಕಕ್ಕೆ ರೆಡಿ ಎಂದ ಆಯ್ಕೆ ಸಮಿತಿ ಅಧ್ಯಕ್ಷ
ಇಂದು ನಡೆಯಲಿರುವ ತಂಡದ ಆಯ್ಕೆಯಲ್ಲಿ ಧೋನಿಗೆ ಆಟಗಾರನಾಗಿ ಅವಕಾಶ ಸಿಗಲಿದೆ ಎಂಬ ಸುಳಿವನ್ನು ಅವರು ನೀಡಿದ್ದಾರೆ. ಧೋನಿಯಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದುಕೊಂಡಿದೆ. ಒಬ್ಬ ಆಟಗಾರನಾಗಿ ಅವರು ತಂಡಕ್ಕೆ ಇನ್ನೂ ಕೊಡುಗೆ ನೀಡುವುದು ಬಾಕಿಯಿದೆ ಎಂದು ಪ್ರಸಾದ್ ಹೇಳಿರುವುದು ಇದರ ಸೂಚನೆಯಾಗಿದೆ.