ವೈರಲ್ ಆಯ್ತು ಧೋನಿ ರನೌಟ್!

ಗುರುವಾರ, 27 ಅಕ್ಟೋಬರ್ 2016 (09:51 IST)
ರಾಂಚಿ: ಟೀಂ ಇಂಡಿಯಾ ನಾಲ್ಕನೇ ಏಕದಿನ ಪಂದ್ಯ ಸೋತಿರಬಹುದು. ಆದರೆ ನ್ಯೂಜಿಲೆಂಡ್ ತಂಡದ ಪ್ರಮುಖ ಬ್ಯಾಟ್ಸ್ ಮನ್ ರಾಸ್ ಟೇಲರ್ ಅವರನ್ನು ನಾಯಕ ಧೋನಿ ರನೌಟ್ ಮಾಡಿದ ಪರಿ ಈಗ ಭಾರೀ ಸದ್ದು ಮಾಡುತ್ತಿದೆ.

ವಿಕೆಟ್ ಹಿಂದೆ ಚುರುಕಿನ ರನೌಟ್, ಸ್ಟಂಪ್ ಔಟ್ ಮಾಡುವುದರಲ್ಲಿ ಧೋನಿ ನಿಸ್ಸೀಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಉದಾಹರಣೆ ನಿನ್ನೆಯ ಪಂದ್ಯ.

46 ನೇ ಓವರಿನಲ್ಲಿ ಉಮೇಶ್ ಯಾದವ್ ರಾಸ್ ಟೇಲರ್ ಗೆ ಬೌಲಿಂಗ್ ಮಾಡಿದ್ದರು. ಇದುವರೆಗೆ ಫಾರ್ಮ್ ನಲ್ಲಿರದಿದ್ದ ಟೇಲರ್ ಈ ಪಂದ್ಯದಲ್ಲಿ ಕೊಂಚ ಬ್ಯಾಟಿಂಗ್ ಗೆ ಕುದುರಿದ್ದರು. ಫೈನ್ ಲೆಗ್ ಕಡೆಗೆ ಬಾಲ್ ತಳ್ಳಿದ ಟೇಲರ್ ರನ್ ಕದಿಯಲು ಓಡಿದ್ದರು.

ಅದೇ ಸಮಯಕ್ಕೆ ಬಾಲ್ ಫೀಲ್ಡ್ ಮಾಡಿದ ಧವಳ್  ಕುಲಕರ್ಣಿ ಧೋನಿ ಕೈಗೆ ಬಾಲ್ ಎಸೆದಿದ್ದರು. ಇನ್ನೂ ವಿಕೆಟ್ ಹತ್ತಿರ ಧೋನಿ ತಲುಪಿರಲಿಲ್ಲ. ಈ ಹಂತದಲ್ಲಿ ಅವರು ವಿಕೆಟ್ ಗೆ ಬೆನ್ನು ಮಾಡಿ ನಿಂತುಕೊಂಡು ಸರಿಯಾಗಿ ವಿಕೆಟ್ ಗೇ ಬಾಲ್ ತಳ್ಳಿದರು. ರನ್ ಕದಿಯುವ ಯತ್ನದಲ್ಲಿ ರಾಸ್ ಟೇಲರ್ ರನೌಟ್ ಆಗಿದ್ದರು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ