ಇಂದಿಗೆ 35 ವರ್ಷ ತುಂಬಿದ ಮಹೇಂದ್ರ ಸಿಂಗ್ ಧೋನಿ

ಗುರುವಾರ, 7 ಜುಲೈ 2016 (12:48 IST)
ಭಾರತದ ಸೀಮಿತ ಓವರುಗಳ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಇಂದಿಗೆ 35 ವರ್ಷ ತುಂಬಿದೆ. ಕ್ರಿಕೆಟ್‌ನ ಶ್ರೇಷ್ಟ ಬ್ಯಾಟ್ಸ್‌ಮನ್ ಪೈಕಿ ಒಬ್ಬರೆಂಬ ಶ್ರೇಯಕ್ಕೆ ಪಾತ್ರರಾದ ಧೋನಿ ಏಕ ದಿನ ಪಂದ್ಯಗಳಲ್ಲಿ ಮತ್ತು ಟಿ 20 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಧೋನಿ ಕುರಿತು ಕೆಲವು ಆಸಕ್ತಿದಾಯಕ ಸಂಗತಿಗಳು ಕೆಳಗಿವೆ:
 
ಧೋನಿ 2004ರ ಡಿಸೆಂಬರ್ 23ರಂದು ಚಿತ್ತಗಾಂಗ್‌ನಲ್ಲಿ ಬಾಂಗ್ಲಾ ವಿರುದ್ಧ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾಗಿದ್ದರು. ಧೋನಿ ತಮ್ಮ ಪ್ರಥಮ ಶತಕವನ್ನು ಕೇವಲ ನಾಲ್ಕನೇ ಏಕದಿನ ಪಂದ್ಯದಲ್ಲಿ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಆಡುತ್ತಿದ್ದ ಧೋನಿ ವಿಶಾಖಪಟ್ಟಣದಲ್ಲಿ ಪಾಕಿಸ್ತಾನದ ವಿರುದ್ಧ 123 ಎಸೆತಗಳಲ್ಲಿ 148 ರನ್ ಸಿಡಿಸಿದರು.
 
ರಾಹುಲ್ ದ್ರಾವಿಡ್ ನಾಯಕತ್ವದಿಂದ ಕೆಳಗಿಳಿದ ಬಳಿಕ ಧೋನಿ 2007ರಲ್ಲಿ ಸೀಮಿತ ಓವರುಗಳ ನಾಯಕರಾಗಿ ನೇಮಕಗೊಂಡರು. ಅವರ ನಾಯಕತ್ವದಲ್ಲಿ ಭಾರತ ಐಸಿಸಿ ವಿಶ್ವ ಟ್ವೆಂಟಿ 20(2007), ಐಸಿಸಿ ಚಾಂಪಿಯನ್ಸ್ ಟ್ರೋಫಿ(2013) ಮತ್ತು ಐಸಿಸಿ ವಿಶ್ವಕಪ್(2011)ರಲ್ಲಿ ಗೆದ್ದಿದೆ.2014ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ಕ್ರಿಕೆಟ್ ಬಳಗವನ್ನು ಅಚ್ಚರಿಗೊಳಿಸಿದ್ದರು.
 
ಧೋನಿ ಅತ್ಯಧಿಕ ಸ್ಕೋರ್ ಅಜೇಯ 183 ರನ್‌ಗಳಾಗಿದ್ದು, ಶ್ರೀಲಂಕಾ ವಿರುದ್ಧ 22ನೇ ಏಕದಿನ ಪಂದ್ಯದಲ್ಲಿ ಗಳಿಸಿದ್ದರು. ಕೇವಲ 145 ಎಸೆತಗಳಲ್ಲಿ ಆ ರನ್‌ಗಳನ್ನು ಸಿಡಿಸಿದ್ದರು.ಏಳನೇ ಕ್ರಮಾಂಕದಲ್ಲಿ ಆಡುವಾಗ ಶತಕ ಸಿಡಿಸಿದ ಏಕದಿನ ಪಂದ್ಯಗಳ ಏಕಮಾತ್ರ ನಾಯಕ ಧೋನಿ. 2012ರಲ್ಲಿ ಪಾಕಿಸ್ತಾನ ವಿರುದ್ಧ ಈ ಸಾಧನೆ ಮಾಡಿದರು. ಧೋನಿ ಅವರ ಆತ್ಮಚರಿತ್ರೆ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದ್ದು, ಅವರ ಪಾತ್ರವನ್ನು ಬಾಲಿವುಡ್ ಸ್ಟಾರ್ ಸುಶಾಂತ್ ಸಿಂಗ್ ರಜಪೂತ್ ನಿರ್ವಹಿಸಲಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ