ಎಂಎಸ್ ಧೋನಿ ನೇರವಾಗಿ ಇಂಗ್ಲೆಂಡ್ ಏಕದಿನಕ್ಕೆ ಕಣಕ್ಕಿಳಿಯಲ್ಲ

ಬುಧವಾರ, 7 ಡಿಸೆಂಬರ್ 2016 (09:00 IST)
ಮುಂಬೈ: ಸುಮಾರು ಎರಡು ತಿಂಗಳು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ನೇರವಾಗಿ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ಮೈದಾನಕ್ಕೆ ಇಳಿಯುವುದು ಅನುಮಾನ. ಅವರು ಏಕದಿನ ಸರಣಿಗೆ ಮೊದಲು ಇಂಗ್ಲೆಂಡ್ ವಿರುದ್ಧಅಭ್ಯಾಸ ಪಂದ್ಯವಾಡುವ ಸಾಧ್ಯತೆಯಿದೆ.

ಈ ಪಂದ್ಯ ಮುಂಬೈಯಲ್ಲಿ ಜನವರಿ 10 ಮತ್ತು 12 ರಂದು ನಡೆಯಲಿದೆ. ಜನವರಿ 15 ರಿಂದ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಆರಂಭವಾಗುತ್ತಿದೆ. ಅನಿಲ್ ಕುಂಬ್ಳೆ ಕೋಚ್ ಆದಾಗಿನಿಂದ ದೀರ್ಘ ಕಾಲ ಮೈದಾನದಿಂದ ದೂರವಿರುವ ಆಟಗಾರರು ಅಭ್ಯಾಸ ಪಂದ್ಯವಾಡಿಯೇ ತಂಡಕ್ಕೆ ಬರಬೇಕು ಎಂದು ನಿಯಮ ರೂಪಿಸಿದ್ದಾರೆ.

ಆದರೆ ಧೋನಿ ಸುದೀರ್ಘ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಹೇಳಿರುವುದರಿಂದ ರಣಜಿ ಟ್ರೋಫಿ ಆಡುವಂತಿರಲಿಲ್ಲ. ಹೀಗಾಗಿ ಅವರು ಬೇರೆ ದಾರಿಯಿಲ್ಲದೆ, ನೇರವಾಗಿ ಏಕದಿನ ಸರಣಿ ಆಡಬಹುದು ಎಂಬ ಸುದ್ದಿ ಹರಡಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ