ದುಬೈ: ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿರಬಹುದು. ಟೆಸ್ಟ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿರಬಹುದು. ಆದರೂ ಐಸಿಸಿ ಬಿಡುಗಡೆ ಮಾಡಿದ ಟೆಸ್ಟ್ ತಂಡದಲ್ಲಿ ಸ್ಥಾನವೇ ಇಲ್ಲ!
ಇದು ವಿಚಿತ್ರವಾದರೂ ಸತ್ಯ. ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಕ್ರಿಕೆಟಿಗನೆಂದರೆ ರವಿಚಂದ್ರನ್ ಅಶ್ವಿನ್ ಮಾತ್ರ. ಟೆಸ್ಟ್ ತಂಡದ ನಾಯಕನಾಗಿ ಸತತ ಎರಡು ಟೆಸ್ಟ್ ಸರಣಿ ಸೋತ ಇಂಗ್ಲೆಂಡ್ ನ ಅಲೆಸ್ಟರ್ ಕುಕ್.
ಆದರೆ ಏಕದಿನ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕನಾಗಿ ಆಯ್ಕೆಯಾಗಿರುವುದು ಅಚ್ಚರಿ ನೀಡಿದೆ. ಏಕದಿನ ತಂಡದಲ್ಲಿ ಕೊಹ್ಲಿಯಲ್ಲದೆ ರವೀಂದ್ರ ಜಡೇಜಾ, ರೋಹಿತ್ ಶರ್ಮಾ ಭಾರತೀಯ ಆಟಗಾರರಿದ್ದಾರೆ.
ಟೆಸ್ಟ್ ತಂಡ ಇಂತಿದೆ: ಅಲೆಸ್ಟರ್ ಕುಕ್ (ನಾಯಕ), ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಜೋ ರೂಟ್, ಆಡಂ ವೋಗ್ಸ್, ಜಾನಿ ಬೇರ್ ಸ್ಟೋ, ಬೆನ್ ಸ್ಟೋಕ್ಸ್, ರವಿಚಂದ್ರನ್ ಅಶ್ವಿನ್, ರಂಗನಾ ಹೆರಾತ್, ಮಿಚೆಲ್ ಸ್ಟಾರ್ಕ್, ಡೇಲ್ ಸ್ಟೈನ್, ಸ್ಟೀವ್ ಸ್ಮಿತ್.
ಏಕದಿನ ತಂಡ: ವಿರಾಟ್ ಕೊಹ್ಲಿ (ನಾಯಕ), ಡೇವಿಡ್ ವಾರ್ನರ್, ಕ್ವಿಂಟನ್ ಡಿ ಕೊಕ್, ರೋಹಿತ್ ಶರ್ಮಾ, ಎಬಿಡಿ ವಿಲಿಯರ್ಸ್, ಜೋಸ್ ಬಟ್ಲರ್, ಮಿಚೆಲ್ ಮಾರ್ಷ್, ರವೀಂದ್ರ ಜಡೇಜಾ, ಮಿಚೆಲ್ ಸ್ಟಾರ್ಕ್, ಕಗಿಸೊ ರಬಡಾ, ಸುನಿಲ್ ನರೈನ್, ಇಮ್ರಾನ್ ತಾಹಿರ್.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ