ನನ್ನ ಆಟದಲ್ಲಿ ಯಾವುದೇ ಕೊರತೆಯಿಲ್ಲ, ಆದರೂ ಟೀಂ ಇಂಡಿಯಾಕ್ಕೆ ಆಯ್ಕೆಯಾಗುತ್ತಿಲ್ಲ ಎಂದ ಯುವರಾಜ್ ಸಿಂಗ್

ಗುರುವಾರ, 29 ಡಿಸೆಂಬರ್ 2016 (13:44 IST)
ನವದೆಹಲಿ: ಯುವರಾಜ್ ಸಿಂಗ್ ಎಂಬ ಆಲ್ ರೌಂಡರ್ ಆಟಗಾರನನ್ನು ಬಹುಶಃ ನಾವೆಲ್ಲಾ ಮರೆತೇ ಬಿಟ್ಟಿದ್ದೇವೆ. ಒಂದು ಕಾಲದಲ್ಲಿ ಅನಿವಾರ್ಯ ಆಟಗಾರನಾಗಿದ್ದ ಅವರು ಇಂದು ಭಾರತ ತಂಡದಲ್ಲಿ ಕಾಣಿಸಿಕೊಳ್ಳುವುದೇ ಅಪರೂಪವಾಗಿ ಬಿಟ್ಟಿದೆ.


ಹಾಗಿದ್ದಾಗಿಯೂ ನನ್ನ ಆಟದ ಶೈಲಿಯಲ್ಲಿ ಯಾವುದೇ ಕೊರತೆಯಿಲ್ಲ. ಆದರೂ ತಂಡಕ್ಕೆ ಆಯ್ಕೆಯಾಗುತ್ತಿಲ್ಲ. ಮತ್ತೆ ತಂಡಕ್ಕೆ ಮರಳಲು ಬೇಕಾದ ಎಲ್ಲಾ ಪ್ರಯತ್ನ ಮಾಡುತ್ತೇನೆ ಎಂದು ಯುವಿ ಹೇಳಿಕೊಂಡಿದ್ದಾರೆ.

35 ವರ್ಷದ ಯುವಿ ತಮ್ಮಲ್ಲಿ ಇನ್ನೂ ಕ್ರಿಕೆಟ್ ಉಳಿದುಕೊಂಡಿದೆ. ಭಾರತಕ್ಕಾಗಿ ಮತ್ತಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಡುವುದನ್ನು ಎದುರು ನೋಡುತ್ತೇನೆ ಎಂದಿದ್ದಾರೆ. ಕಳೆದ ವರ್ಷ ನಡೆದ ಟಿ-ಟ್ವೆಂಟಿ ವಿಶ್ವಕಪ್ ಬಳಿಕ ಯುವಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ.

ಇದೀಗ ವಿವಾಹದ ವಿರಾಮದ ನಂತರ ಮರಳಿ ಅಭ್ಯಾಸ ಆರಂಭಿಸಿದ್ದು, ಐಪಿಎಲ್ ಗೆ ತಯಾರಾಗುತ್ತಿದ್ದಾರೆ. 2011 ರ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಯುವರಾಜ್, ನಂತರ ಕ್ಯಾನ್ಸರ್ ಗೆ ತುತ್ತಾಗಿ ಹಲವು ದಿನ ಕ್ರಿಕೆಟ್ ನಿಂದ ದೂರವುಳಿದಿದ್ದರು. ನಂತರ ಕ್ರಿಕೆಟ್ ಗೆ ಮರಳಿದರಾದರೂ, ಮೊದಲಿನ ಚಾರ್ಮ್ ಇಲ್ಲ. ಅಲ್ಲದೆ, ಕಳೆದ ಟಿ-ಟ್ವೆಂಟಿ ವಿಶ್ವಕಪ್ ಸೋಲಿಗೂ ಯುವಿಯನ್ನು ದೂರಲಾಗಿತ್ತು. ಹೀಗಾಗಿ ಅವರು ತಂಡಕ್ಕೆ ಆಯ್ಕೆಯಾಗುತ್ತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ