ಪಾಕಿಸ್ತಾನದೊಂದಿಗೆ ಸ್ನೇಹ ಬೇಡವೆಂದ ಗಂಭೀರ್

ಬುಧವಾರ, 19 ಅಕ್ಟೋಬರ್ 2016 (09:13 IST)
ನವದೆಹಲಿ: ಕ್ರಿಕೆಟಿಗ ಗೌತಮ್ ಗಂಭೀರ್ ಯಾವಾಗಲೂ ಹೀಗೆಯೇ. ಯಾವುದೇ ವಿಷಯದ ಬಗೆಗಾದರೂ, ನೇರವಾಗಿ ಮಾತನಾಡುತ್ತಾರೆ.

ಈ ಬಾರಿಯೂ ಹಾಗೆ. ಪಾಕಿಸ್ತಾನ ಕಲಾವಿದರು, ಆಟಗಾರರಿಗೆ ಭಾರತದಲ್ಲಿ ಅವಕಾಶ ನೀಡಬಾರದು ಎಂಬ ಚರ್ಚೆ ನಡೆಯುತ್ತಿರುವಾಗ ಅವರು ಧ್ವನಿಯೆತ್ತಿದ್ದಾರೆ. ಸಿನಿಮಾ ಆಗಲಿ, ಕ್ರೀಡೆಯಾಗಲ ದೇಶಕ್ಕಿಂತ ದೊಡ್ಡದಲ್ಲ. ಭಯೋತ್ಪಾದನೆ ವಿರುದ್ಧ ತಕ್ಕ ಕ್ರಮ ಕೈಗೊಳ್ಳುವವರೆಗೂ ಪಾಕಿಸ್ತಾನದೊಂದಿಗೆ ಯಾವುದೇ ನಂಟು ಇಟ್ಟುಕೊಳ್ಳಬಾರದು ಎಂದು ಅವರು ಗಂಭೀರವಾಗಿಯೇ ಹೇಳಿದ್ದಾರೆ.

 “ಎ.ಸಿ ರೂಂನಲ್ಲಿ ಕುಳಿತು ಕಲಾವಿದರನ್ನು ದೇಶಗಳ ವೈರತ್ವದ ವಿಚಾರದಲ್ಲಿ ಸೇರಿಸಬಾರದು. ಕಲೆ ಎನ್ನುವುದು ಅದಕ್ಕಿಂತ ದೊಡ್ಡದು ಎನ್ನುವವರ ವರಸೆಯೇ ನನಗೆ ಅಚ್ಚರಿಯೆನಿಸುತ್ತದೆ. ದೇಶಕ್ಕಿಂತ ಯಾವುದೂ ದೊಡ್ಡದಲ್ಲ. ಒಂದು ವೇಳೆ ಈ ರೀತಿ ವಾದ ಮಾಡುವವರ ಕುಟುಂಬದವರು ಯಾರಾದರೂ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದರೆ ಇಂತಹ ಮಾತನಾಡುತ್ತಿದ್ದರೇ? ಪ್ರಾಣ ಕಳೆದುಕೊಂಡ ಸೈನಿಕರ ಕುಟುಂಬದವರಲ್ಲಿ ಇದೇ ಪ್ರಶ್ನೆ ಹಾಕಲಿ. ಅವರ ಉತ್ತರ ಕೂಡಾ ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದೇ ಇರುತ್ತದೆ’ ಎಂದು ಕಟುವಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ