ಧೋನಿ ಸ್ಟಂಪ್ ಸಂಗ್ರಹಿಸುವುದು ಬಾಲ್ಯ ಸ್ನೇಹಿತನಿಗಲ್ಲ, ಹಾಗಾದರೆ ಏತಕ್ಕೆ?

ಗುರುವಾರ, 7 ಜುಲೈ 2016 (17:09 IST)
ಭಾರತದ ಸೀಮಿತ ಓವರುಗಳ ನಾಯಕ ಎಂಎಸ್ ಧೋನಿ ಪ್ರತಿಬಾರಿ ಟೀಂ ಇಂಡಿಯಾ ಗೆದ್ದಾಗಲೂ ಸ್ಟಂಪ್ ಸಂಗ್ರಹಿಸುತ್ತಾರೆ. ಧೋನಿ ಸ್ಟಂಪ್ ಸಂಗ್ರಹಿಸುವುದು ಏಕೆಂದು ಅನೇಕ ಮಂದಿ ಊಹಾಪೋಹದ ಹೇಳಿಕೆಗಳನ್ನು ನೀಡುತ್ತಿದ್ದರು.
ತನ್ನ ಬಾಲ್ಯದ ಗೆಳೆಯನಿಗಾಗಿ ಧೋನಿ ಪಂದ್ಯದ ದಿನದ ಸ್ಟಂಪ್ ಸಂಗ್ರಹಿಸುತ್ತಿದ್ದಾರೆಂದು ಅನೇಕ ಮಂದಿ ಊಹಿಸಿದ್ದರು.

ನೇಪಾಳಿ ವಾಚ್‌ಮನ್ ಪುತ್ರ ಕುಲಬಿಂದರ್ ಅವರ ಅತ್ಯುತ್ತಮ ಸ್ನೇಹಿತ ಮಾತ್ರವಲ್ಲದೇ ಕ್ರಿಕೆಟ್ ಆಟವನ್ನು ಆಡುವಂತೆ ಧೋನಿಗೆ ಪ್ರೋತ್ಸಾಹಿಸಿದ್ದರು.  ಧೋನಿ ಕ್ರಿಕೆಟ್ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದರು. ಆದರೆ ಕುಲಬಿಂದರ್ ಅವರ ಅದೃಷ್ಟ ಕುಲಾಯಿಸಲಿಲ್ಲ.
 
ಕುಲಬಿಂದರ್ ಸಣ್ಣ ಮನೆಯೊಂದನ್ನು ಕಟ್ಟಿದಾಗ ಕೂಡ ಧೋನಿ ನೆರವನ್ನು ಕೇಳಲಿಲ್ಲ. ಆದಾಗ್ಯೂ ಧೋನಿ  ಅವರ ಮನೆಯ ಸುತ್ತ 320 ಕ್ರಿಕೆಟ್ ಸ್ಟಂಪ್‌ಗಳ ಬೇಲಿಯನ್ನು ನಿರ್ಮಿಸಬೇಕೆಂದು ಕುಲಬಿಂದರ್ ಇಚ್ಛಿಸಿದ್ದರು. ಆದ್ದರಿಂದ ಧೋನಿ ತನ್ನ ಪ್ರೀತಿಯ ಸ್ನೇಹಿತನಿಗೆ ಹಸ್ತಾಂತರಿಸಲು ಸ್ಟಂಪ್‌ಗಳನ್ನು ಪ್ರಾಮಾಣಿಕವಾಗಿ ಸಂಗ್ರಹಿಸುತ್ತಿದ್ದಾರೆಂದು ಹೇಳಲಾಗಿತ್ತು. 
 
ಆದರೆ ಕೆಲವು ತಿಂಗಳ ಹಿಂದೆ ಧೋನಿಯನ್ನು ಈ ಕುರಿತು ಕೇಳಿದಾಗ ಅವರು ನೀಡಿದ ಉತ್ತರ ಬೇರೆಯದಾಗಿತ್ತು.
 ವಿಕೆಟ್ ಸಂಗ್ರಹಿಸುವುದು ನನ್ನ ನಿವೃತ್ತಿಯೋಜನೆಯಾಗಿದೆ. ಒಳ್ಳೆಯ ಕೆಲಸವೆಂದರೆ ನಾನು ಅನೇಕ ಸ್ಟಂಪ್‌ಗಳನ್ನು ಸಂಗ್ರಹಿಸುತ್ತಿರುವುದು. ಆದರೆ ಕೆಟ್ಟದ್ದೆಂದರೆ, ಅವು ಯಾವ ಪಂದ್ಯದ್ದೆಂದು ನಾನು ಗುರುತು ಹಾಕದಿರುವುದು.

ನಾನು ನಿವೃತ್ತಿಯಾದ ಬಳಿಕ ಎಲ್ಲಾ ಪಂದ್ಯಗಳ ವಿಡಿಯೊಗಳನ್ನು ನೋಡಿ ಸ್ಟಂಪ್‌ಗಳಲ್ಲಿ ಪ್ರಾಯೋಜಕರ ಲೋಗೊಗಳನ್ನು ಸೂಕ್ಷ್ಮವಾಗಿ ಗಮನಿಸಿ ಸ್ಟಂಪ್ ಯಾವ ಪಂದ್ಯಕ್ಕೆ ಸೇರಿದ್ದೆಂಬುದನ್ನು ಅಂದಾಜು ಮಾಡುತ್ತೇನೆ. ಇದು ಕ್ರಿಕೆಟ್ ನಿವೃತ್ತಿಬಳಿಕದ ಕಾಲಯಾಪನೆ ಎಂದು ಧೋನಿ ಉತ್ತರಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ