ಇಂದಿನ ಗೆಲುವಿಗಿಂತ ದೊಡ್ಡದಲ್ಲ ನನ್ನ ಶತಕ: ಕೆಎಲ್ ರಾಹುಲ್

ಮಂಗಳವಾರ, 28 ಮಾರ್ಚ್ 2017 (11:08 IST)
ಧರ್ಮಶಾಲಾ: ತಂಡಕ್ಕಾಗಿ ಕೆಲವು ರಿಸ್ಕ್ ತೆಗೆದುಕೊಂಡೆ. ಹೆಚ್ಚು ಕ್ರೀಸ್ ನಲ್ಲಿರಬೇಕಿತ್ತು. ಅದನ್ನು ಮಾಡಿದೆ. ಆದರೆ ಶತಕ ಗಳಿಸಲಾಗಿಲ್ಲ. ಹಾಗೆಂದು ಇಂದಿನ ಗೆಲುವಿಗಿಂತ ದೊಡ್ಡದಲ್ಲ ನನ್ನ ಶತಕ.. ಹೀಗೆಂದು ಕೆಎಲ್ ರಾಹುಲ್ ಹೇಳಿಕೊಂಡಿದ್ದಾರೆ.

 

ಆಸ್ಟ್ರೇಲಿಯಾ ವಿರುದ್ಧ ನಾಲ್ಕೂ ಟೆಸ್ಟ್ ಪಂದ್ಯಗಳಲ್ಲಿ ಅರ್ಧಶತಕ ಗಳಿಸಿಯೂ ಒಮ್ಮೆಯೂ ಶತಕ ಗಳಿಸಲು ಸಾಧ್ಯವಾಗದ ಬಗ್ಗೆ ಸರಣಿ ಗೆದ್ದ ನಂತರ ಅವರಲ್ಲಿ ಪ್ರಶ್ನಿಸಿದಾಗ ಅವರು ಉತ್ತರಿಸಿದ್ದು ಹೀಗೆ.

 
ಇಂದೂ ಕೂಡಾ ಭಾರತ ಸರಣಿ ಗೆಲುವಿನ ಜತೆಗೆ ಅರ್ಧಶತಕವನ್ನೂ ಪೂರೈಸಿದ್ದ ರಾಹುಲ್, ಈ ಸರಣಿ ತನ್ನ ಪಾಲಿಗೆ ವಿಶೇಷವಾಗಿದ್ದು ಎಂದಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ