‘ಮೃತ’ ಕ್ರಿಕೆಟಿಗನಿಂದ ಶೀಘ್ರದಲ್ಲೇ ಕ್ರಿಕೆಟ್ ಕಣಕ್ಕೆ ಜೀವಂತ ಬರುತ್ತೇನೆಂದು ಟ್ವೀಟ್!

ಗುರುವಾರ, 30 ನವೆಂಬರ್ 2017 (10:45 IST)
ಕರಾಚಿ: ಕ್ರಿಕೆಟಿಗರು ಫಾರ್ಮ್ ಕಳೆದುಕೊಂಡಾಗ ಅಭಿಮಾನಿಗಳು ಯದ್ವಾ ತದ್ವಾ ಕಾಲೆಳೆಯುತ್ತಾರೆ. ಅದರಲ್ಲೂ ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ಇನ್ನಿಲ್ಲದ ಟೀಕೆ ಎದುರಿಸಬೇಕಾಗುತ್ತದೆ. ಅಂತಹದ್ದೇ ಟೀಕೆಗೆ ಆಹಾರವಾಗಿದ್ದಾರೆ ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್.
 

ಉಮರ್ ಅಕ್ಮಲ್ ಇತ್ತೀಚೆಗೆ ಹೇಳಿಕೊಳ್ಳುವಂತಹ ಫಾರ್ಮ್ ನಲ್ಲಿಲ್ಲ. ರನ್ ಗಳಿಸಲು ಪರದಾಡುತ್ತಿದ್ದಾರೆ. ಹೀಗಿರುವಾಗ  ಅಭಿಮಾನಿಗಳು ಸುಮ್ಮನೆ ಬಿಡುತ್ತಾರೆಯೇ? ಉಮರ್ ತೀರಿಕೊಂಡಿದ್ದಾರೆಂದು ಟ್ರೋಲ್ ಮಾಡಿದ್ದರು.

ಈ ಸುಳ್ಳು ಸುದ್ದಿಯನ್ನು ಅಲ್ಲಗಳೆಯಲು ಕೊನೆಗೆ ಸ್ವತಃ ಉಮರ್ ವಿಡಿಯೋ ಸಂದೇಶ ಅಪ್ ಲೋಡ್ ಮಾಡಿದ್ದು, ಇಂತಹ ಸುದ್ದಿಗಳನ್ನೆಲ್ಲಾ ನಂಬಬೇಡಿ. ಮುಂಬರುವ ರಾಷ್ಟ್ರೀಯ ಟಿ20 ಕಪ್ ಸೆಮಿಫೈನಲ್ ವೇಳೆಗೆ ಜೀವಂತ ಮೈದಾನದಲ್ಲಿರುತ್ತೇನೆ ಎಂದು ಉಮರ್ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ