ಅಮೀರ್ ಅವರನ್ನು ಪಾಕಿಸ್ತಾನದ 17 ಆಟಗಾರರ ತಂಡದಲ್ಲಿ ನಾಲ್ಕು ಟೆಸ್ಟ್ ಸರಣಿಗಾಗಿ ಆಯ್ಕೆಮಾಡಲಾಗಿದ್ದು, ಜುಲೈ 14ರಿಂದ ಲಾರ್ಡ್ಸ್‌ನಲ್ಲಿ ಟೆಸ್ಟ್ ಆರಂಭವಾಗಲಿದೆ. ಆದರೆ 2010ರಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದರಿಂದ ಅವರಿಗೆ ವೀಸಾ ನೀಡಲಾಗುತ್ತದೋ ಇಲ್ಲವೋ ಎಂಬ ಆತಂಕ ಕಾಡಿತ್ತು. ಈ ಪ್ರಕರಣದಲ್ಲಿ ಅಮೀರ್ ಅವರಿಗೆ ಇಂಗ್ಲೆಂಡ್‌ನಲ್ಲಿ 6 ತಿಂಗಳ ಜೈಲು ಶಿಕ್ಷೆ ಮತ್ತು ಐದು ವರ್ಷಗಳ ಅಮಾನತು ಶಿಕ್ಷೆಯನ್ನು ವಿಧಿಸಲಾಗಿತ್ತು
ಪಿಸಿಬಿ ಮೇ 20ರಂದು ಅಮೀರ್ ವೀಸಾಗೆ ಅರ್ಜಿ ಸಲ್ಲಿಸಿದ್ದು, 21 ದಿನಗಳ ಬಳಿಕ ಅನುಮೋದನೆ ಸಿಕ್ಕಿದೆ. ಅವರ ಅರ್ಜಿಗೆ ಇಸಿಬಿ ಬೆಂಬಲ ವ್ಯಕ್ತಪಡಿಸಿತ್ತು. 2014ರಲ್ಲಿ ವೈಯಕ್ತಿಕವಾಗಿ ಅಮೀರ್ ಯುಕೆ ವೀಸಾಗೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು.