ಪಾಕಿಸ್ತಾನ ಪ್ರಸಿದ್ದ ವೇಗದ ಬೌಲರ್ ವಾಸಿಮ್ ಅಕ್ರಮ್ ಈ ವೈರುಧ್ಯ "ಅನಿವಾರ್ಯ" ಎಂದಿದ್ದಾರೆ. ಸೀಮಿತ ಎಸೆತಗಳ ಕ್ರಿಕೆಟ್‌ನಲ್ಲಿ ತರಬೇಕಾದ ಬದಲಾವಣೆಗಳಲ್ಲಿ ನಾವು ವೇಗವನ್ನು ಕಂಡುಕೊಳ್ಳಲಿಲ್ಲ. ಆದರೆ ಇತರ ತಂಡಗಳು ಈ ದಿಶೆಯಲ್ಲಿ ರಭಸದಿಂದ ಪ್ರಗತಿಯನ್ನು ತಂದುಕೊಂಡವು. ಇಂಗ್ಲೆಂಡ್‌ನ್ನು ನೋಡಿ, 2015ರ ವಿಶ್ವ ಕಪ್ ಬಳಿಕ ಅವರು ತಂದುಕೊಂಡ ಬದಲಾವಣೆ ಗಮನಾರ್ಹ, ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.