ನಿಷೇಧಿತ ಬೌಲರ್ ದ್ಯಾನಿಶ್ ಕನೇರಿಯಾ ನೆರವಿಗೆ ಬರಲೊಪ್ಪಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ

ಶುಕ್ರವಾರ, 18 ನವೆಂಬರ್ 2016 (10:42 IST)
ಕರಾಚಿ: ಪಾಕಿಸ್ತಾನದ ಸ್ಪಿನ್ನರ್ ದ್ಯಾನಿಶ್ ಕನೇರಿಯಾ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯಿಂದ ನಿಷೇಧಕ್ಕೊಳಗಾಗಿ ನಿರುದ್ಯೋಗಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಕ್ರಿಕೆಟ್ ಆಡಳಿತಕ್ಕೆ ಸಂಬಂಧಿಸಿದ ಯಾವುದಾದರೂ ಉದ್ಯೋಗ ನೀಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಮ್ಮತಿಸಿದೆ.

ಹಿಂದೂ ಧರ್ಮಕ್ಕೆ ಸೇರಿದವರಾದ ದ್ಯಾನಿಶ್ ಕನೇರಿಯಾ ಪಾಕ್ ತಂಡವನ್ನು ಪ್ರತಿನಿಧಿಸಿದ್ದರು. ಪಾಕಿಸ್ತಾನದ ಪರ 61 ಟೆಸ್ಟ್ ಪಂದ್ಯ ಆಡಿರುವ ಕನೇರಿಯಾ ಅವರನ್ನು ಕೌಂಟಿ ಕ್ರಿಕೆಟ್ ಆಡುತ್ತಿದ್ದಾಗ ಭ್ರಷ್ಟಾಚಾರ ಆರೋಪದಲ್ಲಿ ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ ಜೀವಾವಧಿ ನಿಷೇಧ ಹೇರಿತ್ತು. ಇದರಿಂದ ಕನೇರಿಯಾ ನಿರುದ್ಯೋಗಿಯಾಗಿದ್ದಾರೆ. ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ. ಪಾಕ್ ಕ್ರಿಕೆಟ್ ನಲ್ಲೂ ಅವರಿಗೆ ಉದ್ಯೋಗ ಸಿಗುತ್ತಿಲ್ಲ.

ಸ್ಪಿನ್ನರ್ ನ ಈ ದಯನೀಯ ಸ್ಥಿತಿಯ ಬಗ್ಗೆ ಆಡಳಿತಾರೂಢ ಪಿಎಂಎನ್-ಎಲ್ ಪಕ್ಷದ ಸಂಸದ ರಮೇಶ್ ಕುಮಾರ್ ವಾಂಕ್ವಾನಿ ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಇದಕ್ಕೆ ಸ್ಪಂದಿಸಿದ ಪಿಸಿಬಿ ಕನೇರಿಯಾಗೆ ಕ್ರಿಕೆಟ್ ವಿಭಾಗದಲ್ಲಿ ಯಾವುದಾದರೂ ಶಾಶ್ವತ ಹುದ್ದೆ ನೀಡುವ ಭರವಸೆಯಿತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ