ಡ್ರೆಸಿಂಗ್​ ರೂಮ್‌ನಲ್ಲೇ ಕ್ರಿಕೆಟರ್ ಪ್ರವೀಣ್ ಕುಮಾರ್‌ ಚಿನ್ನದ ಸರ ಕಳವು

ಬುಧವಾರ, 12 ನವೆಂಬರ್ 2014 (12:08 IST)
ಭಾರತ ಕ್ರಿಕೆಟ್​ ತಂಡದ ವೇಗದ ಬೌಲರ್,  ಪ್ರವೀಣ್​ ಕುಮಾರ್​ ಅವರ ಚಿನ್ನದ ಸರ ಕಳುವಾಗಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ. 


 
ನಾಗ್ಪುರದ 'ವಿದರ್ಭ ಕ್ರಿಕೆಟ್​ ಅಸೋಸಿಯನ್’​ನ ಡ್ರೆಸಿಂಗ್​ ರೂಮ್​’ನಲ್ಲಿ ಈ ಘಟನೆ ನಡೆದಿದೆ. ಬಂಗಾರದ ಈ ಚೈನ್  8 ಲಕ್ಷ ರೂಪಾಯಿ ಬೆಲೆ ಬಾಳುತ್ತಿತ್ತು ಎಂದು ಹೇಳಲಾಗುತ್ತಿದೆ. 

ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತರಪ್ರದೇಶದ ಪರ ಆಡುತ್ತಿರುವ ಪ್ರವೀಣ್  ರಾಜಸ್ತಾನ ವಿರುದ್ದದ ಪಂದ್ಯಕ್ಕೂ ಮೊದಲು ಪ್ರವೀಣ್​ ತಾವು ಕೊರಳಲ್ಲಿ ಧರಿಸಿದ್ದ ಸರವನ್ನು ಡ್ರೆಸಿಂಗ್​ ರೂಮ್‌ನಲ್ಲಿದ್ದ ಕುರ್ಚಿ ಮೇಲೆ ತೆಗೆದಿಟ್ಟಿದ್ದರು. ಅದನ್ನು ಅಲ್ಲೇ ಮರೆತು ಹೋದ ಅವರು ಮ್ಯಾಚ್ ​ಮುಗಿದ ಬಳಿಕ ಮರೆತಿದ್ದ ಸರವನ್ನು ತೆಗೆದುಕೊಂಡು ಬರುವಂತೆ ಸಿಬ್ಬಂದಿಗಳ ಬಳಿ ಹೇಳಿದ್ದಾರೆ. ಆದರೆ ಸರ ಅವರು ಇಟ್ಟ ಸ್ಥಳದಲ್ಲಿರಲಿಲ್ಲ.
 
ಈ ಕುರಿತು ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ