ಸಂಕಟದಿಂದ ಪಾರು ಮಾಡುವ ರಾಹುಲ್ ದ್ರಾವಿಡ್ ಗೇ ಬಂದೊದಗಿದ ಸಂಕಷ್ಟ!

ಭಾನುವಾರ, 26 ಮಾರ್ಚ್ 2017 (08:44 IST)
ಮುಂಬೈ: ಸಂಕಟದಿಂದ ಪಾರು ಮಾಡುವ ಸಂಕಟಹರ ಭಾರತ ತಂಡದ ವಾಲ್ ರಾಹುಲ್ ದ್ರಾವಿಡ್ ಗೇ ಈಗ ಸಂಕಷ್ಟ ಬಂದೊದಗಿದೆ. ದ್ರಾವಿಡ್ ಐಪಿಎಲ್ ತಂಡವನ್ನು ಆರಿಸುವುದೋ, ಬಿಸಿಸಿಐಯನ್ನು ಆರಿಸುವುದೋ ಎಂಬ ಉಭಯ ಸಂಕಟದಲ್ಲಿದ್ದಾರೆ.

 

 
ಬಿಸಿಸಿಐ ಆಡಳಿತ ಮಂಡಳಿ ತನ್ನ ದೇಶೀಯ ಮತ್ತು ಅಂತಾರಾಷ್ಟ್ರೀಯ ತಂಡಗಳ ಕೋಚ್ ಮತ್ತು ಸಹಾಯಕ ಸಿಬ್ಬಂದಿಗೆ ಹೊಸದೊಂದು ಒಪ್ಪಂದ ಮಾಡಿಕೊಳ್ಳಲು ತಯಾರಿ ನಡೆಸಿದೆ. ಅದರಂತೆ ಅವರೀಗ ದೇಶ ಮೊದಲೋ, ಸ್ವ ಹಿತಾಸಕ್ತಿ ಮೊದಲೋ ಎಂಬ ಸಂಕಟಕ್ಕೆ ಸಿಲುಕಿದ್ದಾರೆ.

 
ಈಗಿನ ನಿಯಮದಂತೆ ದ್ರಾವಿಡ್ 10 ತಿಂಗಳು ಭಾರತ ತಂಡದ ಕೋಚ್ ಆಗಿ ಹಾಗೂ ಉಳಿದ 2 ತಿಂಗಳು ಐಪಿಎಲ್ ತಂಡಕ್ಕಾಗಿ ಕೆಲಸ ಮಾಡಬಹುದಾಗಿದೆ. 10 ತಿಂಗಳ ಅವರ ಕೋಚಿಂಗ್ ಕೆಲಸಕ್ಕೆ 2.62 ಕೋಟಿ ರೂ. ಸಂಭಾವನೆ ನೀಡಲಾಗುತ್ತಿದೆ. ದೇಶದ ಇತರ ಸಹಾಯಕ ಸಿಬ್ಬಂದಿಗೂ ಇದೇ ನಿಯಮ ಅನ್ವಯಿಸುತ್ತದೆ.

 
ಆದರೆ ಹೊಸದಾಗಿ ಬಿಸಿಸಿಐ ಈಗ 12 ತಿಂಗಳ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದು, ಇದರಿಂದ ದ್ರಾವಿಡ್ ಐಪಿಎಲ್ ತಂಡದ ಭಾಗವಾಗಲು ಕಷ್ಟವಾಗಬಹುದು. ಹೀಗಾಗಿ ಎರಡರಲ್ಲಿ ಒಂದನ್ನು ಆರಿಸುವ ಸಂದಿಗ್ಧತೆ ದ್ರಾವಿಡ್ ಗೆ ಎದುರಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ