ನಿಯಮಗಳನ್ನು ಗಾಳಿಗೆ ತೂರುವುದೆಲ್ಲಾ ನನ್ನ ಜಾಯಮಾನವಲ್ಲ ಎಂದ ರಾಹುಲ್ ದ್ರಾವಿಡ್!

ಶನಿವಾರ, 10 ಜೂನ್ 2017 (09:10 IST)
ಮುಂಬೈ: ವೈಯಕ್ತಿಕ ಹಿತಾಸಕ್ತಿಯ ಹುದ್ದೆಯಲ್ಲಿರುವವರು ರಾಷ್ಟ್ರೀಯ ಸೇವೆ ಸಲ್ಲಿಸುತ್ತಿರುವ ಬಗ್ಗೆ ಇತ್ತೀಚೆಗೆ ಬಿಸಿಸಿಐಗೆ ರಾಜೀನಾಮೆ ನೀಡಿದ ಅಧಿಕಾರಿ ರಾಮಚಂದ್ರ ಗುಹಾ ಆರೋಪ ಮಾಡಿದ್ದರು. ಇದರಿಂದಾಗಿ ಭಾರತ ಎ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಗೊಂದಲದಲ್ಲಿದ್ದಾರಂತೆ.

 
ರಾಮಚಂದ್ರ ಗುಹಾ ರಾಜೀನಾಮೆ ನೀಡುವ ಮೊದಲು ಬಿಸಿಸಿಐ ಆಡಳಿತಾಧಿಕಾರಿ ವಿನೋದ್ ರಾಯ್ ಗೆ ಪತ್ರ ಬರೆದು ರಾಷ್ಟ್ರೀಯ ತಂಡದಲ್ಲಿದ್ದುಕೊಂಡು ಐಪಿಲ್ ಸೇರಿದಂತೆ ವೈಯಕ್ತಿಕ ಹಿತಾಸಕ್ತಿಯ ಹುದ್ದೆಗಳಲ್ಲಿರುವ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಅಂತಹ ಆಟಗಾರರ ಪೈಕಿ ರಾಹುಲ್ ದ್ರಾವಿಡ್,  ಧೋನಿ, ಸುನಿಲ್ ಗವಾಸ್ಕರ್ ಮುಂತಾದವರೂ ಸೇರಿದ್ದರು. ಈ ಪೈಕಿ ಗವಾಸ್ಕರ್ ಗುಹಾ ಅವರನ್ನೇ ಟೀಕಿಸಿ ಸುಮ್ಮನಾಗಿದ್ದರು. ಆದರೆ ದ್ರಾವಿಡ್ ತಮ್ಮ ಗೊಂದಲ ಪರಿಹರಿಸುವಂತೆ ಬಿಸಿಸಿಐಗೆ ಪತ್ರ ಬರೆದಿದ್ದಾರೆ.

‘ನನಗೆ ನೀಡಿದ ಗುತ್ತಿಗೆಯಲ್ಲಿ ಹೇಳಿರುವಂತೆ ನಾನು ಯಾವುದೇ ನಿಯಮ ಉಲ್ಲಂಘಿಸಿಲ್ಲ. ಒಂದು ವೇಳೆ ನಿಯಮಗಳು ನಂತರ ಬದಲಾಗಿದ್ದರೆ, ನಮ್ಮನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ. ನಿಯಮ ಮುರಿಯುವುದೆಲ್ಲಾ ನನ್ನ ಜಾಯಮಾನವಲ್ಲ. ಹಾಗಾಗಿ ಏನೇ ನಿಯಮಗಳಿದ್ದರೂ, ಅದನ್ನು ಸ್ಪಷ್ಟವಾಗಿ ತಿಳಿಸಿ’ ಎಂದು ದ್ರಾವಿಡ್ ಮನವಿ ಮಾಡಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ