ರೆಹಾನೆಗೆ ಹೆಚ್ಚು ಹೊತ್ತು ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಬೇಡ ಎಂದಿದ್ದರಂತೆ ದ್ರಾವಿಡ್!

ಮಂಗಳವಾರ, 2 ಫೆಬ್ರವರಿ 2021 (10:36 IST)
ಮುಂಬೈ: ಆಸ್ಟ್ರೇಲಿಯಾ ಸರಣಿಗೆ ಸಿದ್ಧರಾಗುವಾಗ ಕರೆ ಮಾಡಿದ್ದ ವಾಲ್ ರಾಹುಲ್ ದ್ರಾವಿಡ್ ತಮಗೆ ನೀಡಿದ್ದ ಅಮೂಲ್ಯ ಸಲಹೆಯೇನೆಂದು ಅಜಿಂಕ್ಯಾ ರೆಹಾನೆ ಬಹಿರಂಗಪಡಿಸಿದ್ದಾರೆ.


ಆಸ್ಟ್ರೇಲಿಯಾ ಸರಣಿಗೆ ತಯಾರಾಗುತ್ತಿದ್ದಾಗ ಕರೆ ಮಾಡಿದ್ದ ದ್ರಾವಿಡ್, ‘ಎರಡನೇ ಟೆಸ್ಟ್ ಬಳಿಕ ನೀವು ತಂಡವನ್ನು ಮುನ್ನಡೆಸಬೇಕೆಂದು ಗೊತ್ತು. ಆದರೆ ಸರಣಿ ವೇಳೆ ಹೆಚ್ಚು ಹೊತ್ತು ನೆಟ್ ಪ್ರಾಕ್ಟೀಸ್ ಮಾಡಬೇಡಿ. ಇದರಿಂದ ನಿಮಗೆ ಅತಿಯಾದ ಒತ್ತಡ ಹೇರಿದಂತೆ ಅನಿಸಬಹುದು. ಆರಾಮವಾಗಿ ಆಡಿ’ ಎಂದು ಸಂದರ್ಶನವೊಂದರಲ್ಲಿ ರೆಹಾನೆ ಬಹಿರಂಗಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ