ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ ವಿರಾಟ್ ಕೊಹ್ಲಿ

ಮಂಗಳವಾರ, 2 ಫೆಬ್ರವರಿ 2021 (09:08 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆಯೊಂದನ್ನು ಬರೆಯಲು ಸಜ್ಜಾಗಿದ್ದಾರೆ.


ಈ ಸರಣಿಯಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯ ಗೆದ್ದರೂ ಕೊಹ್ಲಿ ನಾಯಕನಾಗಿ ಭಾರತದಲ್ಲಿ ಅತೀ ಹೆಚ್ಚು ಗೆಲುವು ದಾಖಲಿಸಿದ ಧೋನಿ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಧೋನಿ ಭಾರತದಲ್ಲಿ ನಾಯಕನಾಗಿ 21 ಟೆಸ್ಟ್ ನಲ್ಲಿ ಗೆಲುವು ಕಂಡಿದ್ದರು. ಕೊಹ್ಲಿ ಸದ್ಯಕ್ಕೆ 20 ಟೆಸ್ಟ್ ಗೆಲುವು ಕಂಡಿದ್ದಾರೆ. ಇನ್ನು ಒಂದೇ ಒಂದು ಟೆಸ್ಟ್ ಗೆದ್ದರೂ ಈ ದಾಖಲೆ ಸಮವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ