ಹಿರಿಯ ಹೆರಾತ್ ಲಂಕಾ ನಾಯಕ!

ಮಂಗಳವಾರ, 25 ಅಕ್ಟೋಬರ್ 2016 (11:05 IST)
ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ 38 ರ ಹರೆಯದ ಹಿರಿಯ ರಂಗನ ಹೆರಾತ್ ನಾಯಕರಾಗಿದ್ದಾರೆ.  ಆದರೆ ಅವರು ಪೂರ್ಣ ಪ್ರಮಾಣದ ನಾಯಕರಲ್ಲ.

ನಾಯಕ ಏಂಜಲೋ ಮ್ಯಾಥ್ಯೂಸ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಶ್ರೀಲಂಕಾ ಮತ್ತು ಜಿಂಬಾಬ್ವೆ ನಡುವೆ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳ ಕಿರು ಸರಣಿಗೆ ಅವರು ನಾಯಕನ ಹೊಣೆ ಹೊರಲಿದ್ದಾರೆ.

ಈಗಾಗಲೇ ಕಿರು ಮಾದರಿಯ ಪಂದ್ಯಗಳಿಗೆ ನಿವೃತ್ತಿ ಹೇಳಿರುವ ಹೆರಾತ್ ಗೆ ತಮ್ಮ ವೃತ್ತಿ ಬದುಕಿನ ಅಂತಿಮ ಕಾಲದಲ್ಲಿ ನಾಯಕತ್ವ ಸಿಕ್ಕಿದ್ದು ವಿಶೇಷವಾಗಿದೆ. 73 ಟೆಸ್ಟ್ ಪಂದ್ಯಗಳನ್ನು ಆಡಿರುವ ಅನುಭವಿ ಹೆರಾತ್ ಲಂಕಾ ನಾಯಕರ ಪೈಕಿ ಅತೀ ಹಿರಿಯ ಎನಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ