ಏಕೈಕ ವಿಕೆಟ್ ಕಿತ್ತರೂ ರವಿಚಂದ್ರನ್ ಅಶ್ವಿನ್ ವೆರಿ ವೆರಿ ಸ್ಪೆಷಲ್ ಆಗಿದ್ಯಾಕೆ ಗೊತ್ತಾ?

ಭಾನುವಾರ, 5 ಮಾರ್ಚ್ 2017 (17:39 IST)
ಬೆಂಗಳೂರು: ಭಾರತ ದ್ವಿತೀಯ ಟೆಸ್ಟ್ ನಲ್ಲಿ ಹೇಳಿಕೊಳ್ಳುವಂತಹ ಸಾಧನೆಯೇನೂ ಮಾಡಿಲ್ಲ. ಅಭಿಮಾನಿಗಳೂ ಭಾರತೀಯರ ಪ್ರದರ್ಶನ ನೋಡಿ ಬೇಸತ್ತಿದ್ದಾರೆ. ಹಾಗಿದ್ದರೂ ರವಿಚಂದ್ರನ್ ಅಶ್ವಿನ್ ಇಂದು ತಾವು ಕಿತ್ತ ಏಕೈಕ ವಿಕೆಟ್ ನಲ್ಲೂ ವಿಶೇಷ ಸಾಧನೆ ಮಾಡಿದ್ದಾರೆ.


ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ವಿಕೆಟ್ ಮಾತ್ರ ಅಶ್ವಿನ್ ಗೆ ದಕ್ಕಿದ್ದು. ಆದರೂ ಅಶ್ವಿನ್ ಮಾತ್ರ ವೆರಿ ಸ್ಪೆಷಲ್ ದಾಖಲೆ ಮಾಡಿದ್ದಾರೆ. ಇದು 8 ನೇ ಬಾರಿ ಅಶ್ವಿನ್ ವಾರ್ನರ್ ಬಲಿ ಪಡೆಯುವುದು. ಅದೂ 12 ಟೆಸ್ಟ್ ಪಂದ್ಯಗಳಲ್ಲಿ 8 ನೇ ಬಾರಿ ವಾರ್ನರ್ ಅಶ್ವಿನ್ ಬಲೆಗೆ ಬಿದ್ದಿದ್ದಾರೆ.

ಅಶ್ವಿನ್ ಇಷ್ಟೊಂದು ಬಾರಿ ಯಾವುದೇ ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡಿರಲಿಲ್ಲ. ವಾರ್ನರ್ ಕೂಡಾ ಇಷ್ಟೊಂದು ಸಲ ಯಾವುದೇ ಬೌಲರ್ ಬಲೆಗೆ ಬಿದ್ದಿರಲಿಲ್ಲ. 41 ಓವರ್ ಎಸೆದೂ ಅಶ್ವಿನ್ ಗೆ ದಕ್ಕಿದ್ದು ಇಂದು ಒಂದೇ ವಿಕೆಟ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ