ಡಿಕ್ಕಿ ಹೊಡೆದರೂ, ಬ್ಯಾಲೆನ್ಸ್ ತಪ್ಪಿದರೂ ಕ್ಯಾಚ್ ಕೈ ಚೆಲ್ಲದ ರವೀಂದ್ರ ಜಡೇಜಾ
ಶನಿವಾರ, 26 ಡಿಸೆಂಬರ್ 2020 (09:32 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಹಿಡಿದ ಕ್ಯಾಚ್ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂದು ಆಸ್ಟ್ರೇಲಿಯಾದ ಮ್ಯಾಥ್ಯೂ ವೇಡ್ ವಿಕೆಟ್ ಪಡೆಯಲು ಜಡೇಜಾ ಹಿಡಿದ ಆ ಅದ್ಭುತ ಕ್ಯಾಚ್ ಕಾರಣವಾಯಿತು. ಮ್ಯಾಥ್ಯೂ ವೇಡ್ ಹೊಡೆದ ಚೆಂಡು ಕ್ಯಾಚ್ ಪಡೆಯಲು ಜಡೇಜಾ ಮತ್ತು ಶಬ್ನಂ ಗಿಲ್ ಇಬ್ಬರೂ ಪ್ರಯತ್ನ ನಡೆಸಿದರು. ಇಬ್ಬರೂ ಬಾಲ್ ಕಡೆಗೆ ಗಮನ ಕೊಡುತ್ತಾ ಓಡುತ್ತಿದ್ದರು. ಈ ಪೈಕಿ ಜಡೇಜಾ ಕ್ಯಾಚ್ ಪಡೆದರು. ಆದರೆ ಕ್ಯಾಚ್ ಪಡೆಯುವಾಗ ಗಿಲ್ ಡಿಕ್ಕಿ ಹೊಡೆದರು. ಸಾಮಾನ್ಯ ಆಟಗಾರರಾಗಿದ್ದರೆ ಆ ಕ್ಯಾಚ್ ಕೈ ತಪ್ಪಿ ಹೋಗುತ್ತಿತ್ತೇನೋ. ಆದರೆ ಜಡೇಜಾ ತಾವು ಬೆಸ್ಟ್ ಫೀಲ್ಡರ್ ಎನ್ನುವುದನ್ನು ನಿರೂಪಿಸಿಬಿಟ್ಟರು. ಬ್ಯಾಲೆನ್ಸ್ ತಪ್ಪಿದರೂ ಚೆಂಡು ಮಾತ್ರ ತಮ್ಮ ಕೈಯಿಂದ ಜಾರದಂತೆ ನೋಡಿಕೊಂಡರು. ಇದು ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ.