ಮುದ್ದಾದ ಮಗುವಿಗೆ ಚೆಂದದ ಹೆಸರಿಟ್ಟ ರವೀಂದ್ರ ಜಡೇಜಾ
ಜಡೇಜಾ ಮತ್ತು ಪತ್ನಿ ತಮ್ಮ ಮಗುವಿಗೆ ‘ನಿಧ್ಯಾನಾ’ ಎಂದು ಹೆಸರಿಟ್ಟಿದ್ದಾರಂತೆ. ಹಾಗಂತ ಅವರು ಟ್ವಿಟರ್ ನಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಮಹತ್ವದ ಟೂರ್ನಿಗಾಗಿ ಗರ್ಭಿಣಿ ಪತ್ನಿಯನ್ನು ಬಿಟ್ಟು ತೆರಳಲೇಬೇಕು ಎಂದು ಅವರು ಇಂಗ್ಲೆಂಡ್ ವಿಮಾನ ಏರುವ ಮೊದಲು ಸುದ್ದಿಗಾರರೊಂದಿಗೆ ತಮ್ಮ ನೋವು ತೋಡಿಕೊಂಡಿದ್ದರು.