ಪ್ರಧಾನಿ ಮೋದಿಗೆ ವಿಶೇಷ ಕಾರಣಕ್ಕೆ ಥ್ಯಾಂಕ್ಸ್ ಹೇಳಿದ ರವೀಂದ್ರ ಜಡೇಜಾ

ಶುಕ್ರವಾರ, 30 ಜೂನ್ 2017 (08:39 IST)
ನವದೆಹಲಿ: ಪ್ರಧಾನಿ ಮೋದಿ ಇತ್ತೀಚೆಗೆ ನೆದರ್ಲ್ಯಾಂಡ್ಸ್ ದೇಶಕ್ಕೆ ಹೋಗಿದ್ದರು. ಆಗ ಅವರಿಗೆ ಅಲ್ಲಿನ ಪ್ರಧಾನಿ ಮಾರ್ಕ್ ರುಟ್ ವಿಶೇಷ ಉಡುಗೊರೆಯೊಂದನ್ನು ನೀಡಿದ್ದರು.

 
ಪ್ರಧಾನಿಗೆ ಉಡುಗೊರೆಯಾಗಿ ಸಿಕ್ಕಿದ್ದ ಆ ಸೈಕಲ್ ನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದರು. ಅದಕ್ಕೆ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದರು. ಅದೆಷ್ಟೋ ಜನ ಮೆಚ್ಚಿಕೊಂಡಿದ್ದರು.

ಅದೇ ಪ್ರಕಾರ ಕ್ರಿಕೆಟಿಗ ರವೀಂದ್ರ ಜಡೇಜಾ ಪ್ರಧಾನಿ ಮೋದಿಯ ಪೋಸ್ಟ್ ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಎಷ್ಟೋ ಮಂದಿಗೆ ಪರಿಸರ ಸ್ನೇಹಿ ಸೈಕಲ್ ಬಳಸಲು ಸ್ಪೂರ್ತಿ ತುಂಬಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ