ಆಲ್ ರೌಂಡರ್ ರವೀಂದ್ರ ಜಡೇಜಾ ನಿಶ್ಚಿತಾರ್ಥ

ಶುಕ್ರವಾರ, 5 ಫೆಬ್ರವರಿ 2016 (10:57 IST)
ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ, ಆಲ್ ರೌಂಡರ್ ರವೀಂದ್ರ ಜಡೇಜಾ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇಂದು ಅವರು ಮೆಕ್ಯಾನಿಕಲ್ ಇಂಜಿನಿಯರ್ ಪದವಿ ಪಡೆದಿರುವ ಬಹುಕಾಲದ ಗೆಳತಿ ರೀವಾ ಸೋಲಂಕಿ ಎಂಬುವವರ ಜತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. 

ರಾಜ್ಕೋಟ್ ನಿವಾಸಿಯಾಗಿರುವ ರೀವಾ ಆತ್ಮೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು ಸದ್ಯ ದೆಹಲಿಯಲ್ಲಿ ಯುಪಿಎಸ್‌ಸಿ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.
 
ಅವರ ತಾಯಿ ಭಾರತೀಯ ರೇಲ್ವೆ ಉದ್ಯೋಗಿಯಾಗಿದ್ದು ತಂದೆ ಉಧ್ಯಮಿಯಾಗಿದ್ದಾರೆ.
 
ರಾಜ್‌ಕೋಟ್‌ನಲ್ಲಿರುವ ಜಡೇಜಾ ಒಡೆತನದ ರೆಸ್ಟೋರೆಂಟ್‌ನಲ್ಲಿ ಇಂದು ಅವರಿಬ್ಬರ ವಿವಾಹ ನಿಶ್ಚಿತಾರ್ಥ ನಡೆಯಲಿದೆ ಅವರ ಸಹೋದರಿ ನೈನಾ ಜಡೇಜಾ ಖಚಿತಪಡಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ