ಮಾಜಿ ಆಟಗಾರರ ಕೈಲಾಗದ್ದು ಕೊಹ್ಲಿ ಪಡೆಗೆ ಸಾಧ್ಯವಾಯಿತೆಂದ ರವಿಶಾಸ್ತ್ರಿ
ಬುಧವಾರ, 2 ಆಗಸ್ಟ್ 2017 (08:48 IST)
ಕೊಲೊಂಬೋ: ನಾಳೆಯಿಂದ ಪ್ರಾರಂಭವಾಗಲಿರುವ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ತಯಾರಾಗುತ್ತಿರುವ ಟೀಂ ಇಂಡಿಯಾವನ್ನು ಕೋಚ್ ರವಿಶಾಸ್ತ್ರಿ ಕೊಂಡಾಡಿದ್ದಾರೆ.
ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವಿನ ನಂತರ ಇನ್ನಷ್ಟು ಉಬ್ಬಿಹೋಗಿರುವ ರವಿಶಾಸ್ತ್ರಿ ಕೊಹ್ಲಿಗೆ ಹೊಗಳುವುದರಲ್ಲೇ ಖುಷಿ ಕಾಣುತ್ತಿದ್ದಾರೆ. ಇದೀಗ ಮಾಜಿ ಆಟಗಾರರನ್ನು ಟೀಕಿಸಿ ಕಳೆದ ಎರಡು ವರ್ಷಗಳಿಂದ ಆಡುತ್ತಿರುವ ಟೀಂ ಇಂಡಿಯಾವನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ.
ಶ್ರೀಲಂಕಾದಲ್ಲಿ 20 ವರ್ಷಗಳ ನಂತರ ಟೆಸ್ಟ್ ಸರಣಿ ಗೆದ್ದಿದ್ದು ಭಾರತ 2015 ರಲ್ಲಿ. ಅಂದರೆ ಒಂದು ಟೆಸ್ಟ್ ಸರಣಿ ಗೆಲ್ಲಲು ಅಷ್ಟು ವರ್ಷ ಬೇಕಾಯಿತು. ಹಾಗಿದ್ದರೆ ಕಳೆದ ಎರಡು ದಶಕಗಳಲ್ಲಿ ತಂಡಕ್ಕಾಗಿ ಎಷ್ಟೋ ದಿಗ್ಗಜರೆನಿಸಿಕೊಂಡ ಆಟಗಾರರು ಆಡಿದ್ದಾರೆ. ಹಾಗಿದ್ದರೂ ಅವರ ಕೈಲಾಗದ್ದು, ಈ ಹುಡುಗರಿಗೆ ಸಾಧ್ಯವಾಗುತ್ತಿದೆ ಎಂದು ರವಿಶಾಸ್ತ್ರಿ ಹೊಗಳಿದ್ದಾರೆ. ಆದರೆ ಶಾಸ್ತ್ರಿ ಸಾಹೇಬರಿಗೆ ಆವತ್ತಿನ ಸ್ಟ್ರಾಂಗ್ ಲಂಕಾ ತಂಡಕ್ಕೂ ಈಗಿನ ದುರ್ಬಲ ಲಂಕಾ ತಂಡಕ್ಕೂ ವ್ಯತ್ಯಾಸ ಗೊತ್ತಾಗಲಿಲ್ಲವೇನೋ ಬಿಡಿ.!