ರಿಯೋ ಒಲಿಂಪಿಕ್ಸ್: ಭಾರತ ತಂಡಕ್ಕೆ ಕ್ರೀಡಾಗ್ರಾಮದಲ್ಲಿ ಔಪಚಾರಿಕ ಸ್ವಾಗತ

ಗುರುವಾರ, 4 ಆಗಸ್ಟ್ 2016 (10:24 IST)
ಬ್ರೆಜಿಲ್ ಸಂಸ್ಕೃತಿಯ ಕಿರು ಪ್ರದರ್ಶನದ ಜತೆ ಸಂಗೀತ ಮತ್ತು ನೃತ್ಯದ ಮೂಲಕ ಒಲಿಂಪಿಕ್ ಕ್ರೀಡಾಗ್ರಾಮದಲ್ಲಿ  ಔಪಚಾರಿಕ ಸ್ವಾಗತ ಸಮಾರಂಭದೊಂದಿಗೆ ಭಾರತ ತಂಡವನ್ನು ಸ್ವಾಗತಿಸಲಾಯಿತು. ಸುಮಾರು 45 ನಿಮಿಷಗಳ ಕಾಲ ನಡೆದ ಸಮಾರಂಭದಲ್ಲಿ ಅರ್ಧಕ್ಕಿಂತ ಹೆಚ್ಚು ಭಾರತದ ತಂಡ ಭಾಗವಹಿಸಿತ್ತು. ಬಿಳಿಯ ಭಾರತದ ಟ್ರಾಕ್‌ಸೂಟ್‌ ಧರಿಸಿದ್ದ  ತಂಡದ ಕ್ರೀಡಾಪಟುಗಳು ಹುಮ್ಮಸ್ಸಿನಲ್ಲಿದ್ದರು.
 
 
ಭಾರತದ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ನಾರಾಯಣ ಸ್ವಾಮಿ, ರಾಮಚಂದ್ರನ್ ಮತ್ತು ತಂಡದ ಉಸ್ತುವಾರು ರಾಕೇಶ್ ಗುಪ್ತಾ ಗ್ರಾಮದ ಮೇಯಲ್ ಮಾಜಿ ಬ್ಯಾಸ್ಕೆಟ್‌ಬಾಲ್ ಆಟಗಾರ ಮತ್ತು ಎರಡು ಬಾರಿ ಒಲಿಂಪಿಕ್ ಪದಕವಿಜೇತ ಜ್ಯಾನೆತ್ ಆರ್ಕೇನ್ ಅವರಿಗೆ ಎರಡು ಕೊಡುಗೆಗಳನ್ನು ನೀಡಿದರು.
 
ಅವುಗಳ ಪೈಕಿ ಒಂದು ಬೆಳ್ಳಿ ಆನೆಗಳ ಜೊತೆಯಾಗಿದ್ದು, ಇನ್ನೊಂದು ಚಿನ್ನದ ಹೊದಿಕೆಯ ನವಿಲು. ಅದರ ಫ್ರೇಮ್ ಕೆಳಗೆ ಐಒಎ ಲೋಗೊ ಮುದ್ರಿಸಲಾಗಿದೆ.
 
ಬ್ರೆಜಿಲ್ ಸ್ವರತರಂಗ ಪ್ರದರ್ಶನವು ಭಾರತದ ನಿಯೋಗವನ್ನು ಬಹಮಾಸ್, ಬುರ್ಕಿನೊ ಫಾಸೊ, ಗಾಂಬಿಯಾ ಮತ್ತು ನಾರ್ವೆ ನಿಯೋಗದೊಂದಿಗೆ ಸ್ವಾಗತಿಸಿತು.
 
 ಪ್ರತಿಯೊಂದು ರಾಷ್ಟ್ರದ ರಾಷ್ಟ್ರಧ್ವಜವನ್ನು ಮೇಲೆತ್ತಿ ಅವರ ರಾಷ್ಟ್ರಗೀತೆಗಳನ್ನು ನುಡಿಸುವುದು ಸಮಾರಂಭದಲ್ಲಿ ಸೇರಿದೆ.  ಫೋರೋ, ಸಾಂಬಾ ಮತ್ತು ಬೋಸ್ಸಾ ನೋವಾ ಬ್ರೆಜಿಲ್ ಸ್ವರತರಂಗಗಳ ಹಂಚಿಕೆಯ ನಂತರ ಬುಡಕಟ್ಟು ನೃತ್ಯದೊಂದಿಗೆ ಸಮಾರಂಭ ಆರಂಭವಾಯಿತು.  ದಿವಂಗತ ಬ್ರೆಜಿಲಿಯನ್ ಲೆಜೆಂಡ್‌ಗಳಾದ ರಾಲ್ ಸೈಕ್ಸಾಸ್ ಮತ್ತು ಟಿಮ್ ಮೈಯಾ ಅವರ ಸಂಗೀತವನ್ನು ಕೆಲವು ಇತ್ತೀಚಿನ ಹಿಟ್‌ಗಳೊಂದಿಗೆ ನುಡಿಸಲಾಯಿತು.
 
 ಸಂಗೀತ ಮತ್ತು ನೃತ್ಯದ ಬಳಿಕ ಒಲಿಂಪಿಕ್ ಗ್ರಾಮದ ಮೇಯರ್ ಅರ್ಕೈನ್ ಮಾನವತ್ವ ಪ್ರತಿಪಾದಿಸುವ ಕ್ರೀಡೆಗಳ ಮಹತ್ವದ ಬಗ್ಗೆ ಭಾಷಣ ಮಾಡಿ ರಿಯೋಗೆ ತಂಡಗಳನ್ನು ಸ್ವಾಗತಿಸಿದರು.
 
ಒಲಿಂಪಿಕ್ ಗ್ರಾಮವನ್ನು ಜುಲೈ 24ರಂದು ತೆರೆಯಲಾಗಿದ್ದು ಗ್ರಾಮದಲ್ಲಿ 31 ಕಟ್ಟಡಗಳು ಮತ್ತು 3604 ಅಪಾರ್ಟ್‌ಮೆಂಟ್‌ಗಳಿವೆ. ಇದನ್ನು ರಿಯೋ ಪಶ್ಚಿಮದ ರೆಕ್ರಿಯೊ ಡಾಸ್ ಬಂಡೈರಾಂಟೆಸ್‌ನ ನೆರೆಯಲ್ಲಿ ನಿರ್ಮಿಸಲಾಗಿದ್ದು ಬಾರಾ ಒಲಿಂಪಿಕ್ ಪಾರ್ಕ್‌ಗೆ ಹತ್ತಿರವಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ