ಕೊರೋನಾದಿಂದ ಗುಣಮುಖರಾಗಿ ತಂಡ ಸೇರಿಕೊಂಡ ರಿಷಬ್ ಪಂತ್

ಗುರುವಾರ, 22 ಜುಲೈ 2021 (12:08 IST)
ಲಂಡನ್: ಕೊರೋನಾದಿಂದ ಚೇತರಿಸಿಕೊಂಡ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಈಗ ಬಯೋ ಬಬಲ್ ವಾತಾವರಣಕ್ಕೆ ಸೇರ್ಪಡೆಯಾಗಿದ್ದಾರೆ.


ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಈ ಪೈಕಿ ರಿಷಬ್ ಕೂಡಾ ಒಬ್ಬರು. ಇದೀಗ ಅವರು ನೆಗೆಟಿವ್ ವರದಿ ಬಂದ ಕಾರಣ ಮತ್ತೆ ತಂಡವನ್ನು ಕೂಡಿಕೊಂಡಿದ್ದಾರೆ.

ಇದೀಗ ಟೀಂ ಇಂಡಿಯಾ ಅಭ್ಯಾಸ ಪಂದ್ಯವಾಡುತ್ತಿದ್ದು, ಎರಡನೇ ಅಭ್ಯಾಸ ಪಂದ್ಯದ ವೇಳೆಗೆ ರಿಷಬ್ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ