ಕಳೆಗುಂದಿದ್ದ ಕುಲ್-ಚಾ ಜೋಡಿಗೆ ರಾಹುಲ್ ದ್ರಾವಿಡ್ ಬಲ ತುಂಬಿದ್ದು ಹೇಗೆ?

ಬುಧವಾರ, 21 ಜುಲೈ 2021 (11:18 IST)
ಕೊಲೊಂಬೋ: ರವಿಚಂದ್ರನ್ ಅಶ್ವಿನ್-ರವೀಂದ್ರ ಜಡೇಜಾ ಬಳಿಕ ಟೀಂ ಇಂಡಿಯಾಗೆ ಕುಲ್-ಚಾ ಜೋಡಿ ಎಂದೇ ಕರೆಯಿಸಿಕೊಳ್ಳುವ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಅವರೇ ಸೀಮಿತ ಓವರ್ ಗಳ ಖಾಯಂ ಸ್ಪಿನ್ನರ್ ಗಳು ಎಂಬ ಕಾಲವಿತ್ತು.


ಆದರೆ ಧೋನಿ ತಂಡದಿಂದ ನಿವೃತ್ತಿಯಾದ ಬಳಿಕ ಈ ಸ್ಪಿನ್ನರ್ ಗಳು ಮಾರ್ಗದರ್ಶನದ ಕೊರತೆಯಿಂದ ಕಳೆಗುಂದಿದರು ಎಂದರೆ ತಪ್ಪಾಗಲಾರದು. ಕುಲದೀಪ್ ಯಾದವ್ ಅಪರೂಪಕ್ಕೆ ತಂಡಕ್ಕೆ ಆಯ್ಕೆಯಾದರೆ, ಯಜುವೇಂದ್ರ ಚಾಹಲ್ ಆಡುವ ಬಳಗದಲ್ಲಿದ್ದರೂ ಹೇಳಿಕೊಳ್ಳುವ ಪ್ರದರ್ಶನ ನೀಡುತ್ತಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಟೀಂ ಇಂಡಿಯಾ ಸೀಮಿತ ಓವರ್ ಗಳ ಪಂದ್ಯದಲ್ಲಿ ಯುವ ಸ್ಪಿನ್ನರ್ ಗಳನ್ನು ಆಶ‍್ರಯಿಸಿತ್ತು.

ಆದರೆ ಈಗ ಶ್ರೀಲಂಕಾ ಪ್ರವಾಸಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಿ ಬಂದ ಮೇಲೆ ಇಬ್ಬರು ಆಟಗಾರರ ಪರಿಸ್ಥಿತಿ ಬದಲಾಗಿದೆ. ಇಬ್ಬರೂ ಮತ್ತೆ ಜೋಡಿಯಾಗಿ ಎದುರಾಳಿಗಳಿಗೆ ಕಡಿವಾಣ ಹಾಕುತ್ತಿದ್ದಾರೆ. ಮತ್ತೆ ತಮ್ಮ ಹಳೆಯ ವೈಭವಕ್ಕೆ ಮರಳುವ ಸೂಚನೆ ನೀಡಿದ್ದಾರೆ. ಇಬ್ಬರೂ ತಮಗೆ ದ್ರಾವಿಡ್ ನೀಡಿದ ಸ್ಪೂರ್ತಿ ನೆನೆಸಿಕೊಂಡಿದ್ದಾರೆ. ಲಂಕಾಗೆ ಕಾಲಿಟ್ಟಾಗಿನಿಂದ ದ್ರಾವಿಡ್ ಇಬ್ಬರಿಗೂ ಸಾಕಷ್ಟು ಸಲಹೆ ನೀಡಿದ್ದಾರೆ. ಇದೇ ಇಬ್ಬರಿಗೂ ಈಗ ಫಾರ್ಮ್ ಕಂಡುಕೊಳ್ಳಲು ಸಹಾಯವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ