ವಿಶ್ವದಾಖಲೆಗೆ 27 ರನ್ ದೂರದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ

ಮಂಗಳವಾರ, 9 ಜುಲೈ 2019 (09:20 IST)
ಲಂಡನ್: ಅತ್ಯುತ್ತಮ ಫಾರ್ಮ್ ನಲ್ಲಿರುವ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ವಿಶ್ವ ದಾಖಲೆಯೊಂದಕ್ಕೆ 27 ರನ್ ದೂರದಲ್ಲಿದ್ದಾರೆ.


ಇಂದು ನ್ಯೂಜಿಲೆಂಡ್ ವಿರುದ್ಧ ಭಾರತ ವಿಶ್ವಕಪ್ ಸೆಮಿಫೈನಲ್ ಪಂದ್ಯವಾಡಲಿದ್ದು, ಈ ಪಂದ್ಯದಲ್ಲಿ ರೋಹಿತ್ 27 ರನ್ ಗಳಿಸಿದರೆ ಒಂದೇ ವಿಶ್ವಕಪ್ ನಲ್ಲಿ ಗರಿಷ್ಠ ರನ್ ಪೇರಿಸಿದ ಸಚಿನ್ ತೆಂಡುಲ್ಕರ್ ವಿಶ್ವದಾಖಲೆಯನ್ನು ಮುರಿಯಲಿದ್ದಾರೆ.

ಸಚಿನ್ ಒಂದೇ ವಿಶ್ವಕಪ್ ನಲ್ಲಿ 647 ರನ್ ಗಳಿಸಿ ವಿಶ್ವದಾಖಲೆ ಮಾಡಿದ್ದರು. ರೋಹಿತ್ ಈ ವಿಶ್ವಕಪ್ ನಲ್ಲಿ 621 ರನ್ ಗಳಿಸಿದ್ದು, ಇನ್ನು 27 ರನ್ ಗಳಿಸಿದರೆ ಆ ದಾಖಲೆ ಮುರಿದು ಬೀಳಲಿದೆ. ಅಷ್ಟೇ ಅಲ್ಲದೆ, ಇಂದು ಶತಕ ಸಿಡಿದರೆ ವಿಶ್ವಕಪ್ ಕೂಟಗಳಲ್ಲಿ ಅತೀ ಹೆಚ್ಚು ಶತಕ ದಾಖಲಿಸಿದ ಸಚಿನ್ ವಿಶ್ವದಾಖಲೆಯನ್ನೂ ಮುರಿಯಲಿದ್ದಾರೆ.

ಇನ್ನು, ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ನಂ.2 ಸ್ಥಾನದಲ್ಲಿದ್ದು, ನಂ.1 ಸ್ಥಾನದಲ್ಲಿರುವ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಲು ಕೇವಲ 4 ಅಂಕಗಳ ದೂರದಲ್ಲಿದ್ದಾರೆ. ಕೊಹ್ಲಿ 889 ಅಂಕ ಹೊಂದಿದ್ದರೆ ರೋಹಿತ್ 885 ಅಂಕ ಹೊಂದಿದ್ದಾರೆ. ಇದೇ ಫಾರ್ಮ್ ಮುಂದುವರಿಸಿದರೆ ರೋಹಿತ್ ಕೊಹ್ಲಿಯನ್ನು ಹಿಂದಿಕ್ಕಿ ನಂ.1 ಪಟ್ಟ ಅಲಂಕರಿಸಿದರೂ ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ