ರೋಹಿತ್ ಶರ್ಮಾ ಇಷ್ಟು ಬೇಗ ಈ ಸಾಧನೆ ಮಾಡಿದ್ರು!

ಗುರುವಾರ, 24 ಅಕ್ಟೋಬರ್ 2019 (09:17 IST)
ದುಬೈ: ಭಾರತ ಮತ್ತು ದ.ಆಫ್ರಿಕಾ ನಡುವಿನ ಟೆಸ್ಟ್ ಸರಣಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದು ರನ್ ಹೊಳೆಯನ್ನೇ ಹರಿಸಿದ್ದ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರೀ ಸಾಧನೆ ಮಾಡಿದ್ದಾರೆ.


ಮೂರು ಪಂದ್ಯಗಳಿಂದ ಒಂದು ದ್ವಿಶತಕ ಮತ್ತು ಎರಡು ಶತಕ ಸಿಡಿಸಿದ್ದ ರೋಹಿತ್ ಇದೀಗ ಐಸಿಸಿ ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ 10 ರೊಳಗೆ ಸ್ಥಾನ ಪಡೆದಿದ್ದಾರೆ. ಪ್ರಸಕ್ತಿ ರೋಹಿತ್ 10 ನೇ ಸ್ಥಾನದಲ್ಲಿದ್ದಾರೆ.

ಆದರೆ ನಂ.1 ಸ್ಥಾನಕ್ಕೇರುವ ಕನಸಿನಲ್ಲಿದ್ದ ವಿರಾಟ್ ಕೊಹ್ಲಿ ಮೂರನೇ ಟೆಸ್ಟ್ ನಲ್ಲಿ ಕಳಪೆ ಮೊತ್ತಕ್ಕೆ ಔಟಾಗಿ ಎರಡನೇ ಸ್ಥಾನದಲ್ಲೇ ಉಳಿದಿದ್ದಾರೆ. ಅದೂ ಸಾಲದೆಂಬಂತೆ ಕೆಲವು ಅಂಕಗಳನ್ನು ಕಳೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ