ಕೊಲೊಂಬೊ: ರೋಹಿತ್ ಶರ್ಮಾ ಸಿಡಿದರೆಂದರೆ ಬೌಂಡರಿಗಳಿಗಿಂತ ಹೆಚ್ಚು ಸಿಕ್ಸರ್ ಗಳ ಸಂಖ್ಯೆಯೇ ಹೆಚ್ಚಿರುತ್ತದೆ. ಅದೇ ಕಾರಣಕ್ಕೆ ಅವರೀಗ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.
ಭಾರತದ ಪರ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಇದುವರೆಗೆ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಹೆಸರಲ್ಲಿತ್ತು. ಅವರು ಟಿ20 ಕ್ರಿಕೆಟ್ ನಲ್ಲಿ ಒಟ್ಟು 75 ಸಿಕ್ಸರ್ ಸಿಡಿಸಿದ್ದರು. ಇದೀಗ ರೋಹಿತ್ ಶರ್ಮಾ ಕೂಡಾ ಅಷ್ಟೇ ಸಿಕ್ಸರ್ ಗಳೊಂದಿಗೆ ಯುವಿ ದಾಖಲೆ ಸರಿಗಟ್ಟಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಒಟ್ಟು 5 ಸಿಕ್ಸರ್ ಸಿಡಿಸಿದ ರೋಹಿತ್ ಈ ದಾಖಲೆ ಮಾಡಿದ್ದಾರೆ.
ಅವರ ಜತೆಗೆ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೂಡಾ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಕಾರ್ತಿಕ್ 50 ನೇ ಸ್ಟಂಪ್ ಔಟ್ ಮಾಡುವ ಮೂಲಕ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಸ್ಟಂಪ್ ಔಟ್ ಮಾಡಿದ ವಿಕೆಟ್ ಕೀಪರ್ ಗಳ ಪೈಕಿ ನಾಲ್ಕನೇ ಸ್ಥಾನಕ್ಕೇರಿದರು. ಕಮ್ರಾನ್ ಅಕ್ಮಲ್ 92 ಸ್ಟಂಪ್ ಔಟ್ ಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ, ಧೋನಿ 70 ಸ್ಟಂಪ್ ಔಟ್ ಗಳೊಂದಿಗೆ ದ್ವಿತೀಯ, ಕುಮಾರ ಸಂಗಕ್ಕಾರ 60 ಸ್ಟಂಪ್ ಔಟ್ ಗಳೊಂದಿಗೆ ತೃತೀಯ ಸ್ಥಾನದಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ